ಇಂದು ಅರಮನೆ ಮೈದಾನದಲ್ಲಿ ಅಂಬರೀಶ್ ವೈಕುಂಠ ಸಮಾರಾಧನೆ ನಡೆಯುತ್ತಿದ್ದು, ಅಂಬಿ ಪುತ್ರ ಅಭಿಷೇಕ್​​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ವೈಕುಂಠ ಸಮಾರಾಧನೆಗೆ ಆಗಮಿಸಿದ ಅಭಿಷೇಕ್, ಭತ್ತದ ತೆನೆ ಹಿಡಿದುಕೊಂಡು ಬಂದರು. ವೈಕುಂಠ ಸಮಾರಾಧನೆಗೆ ಮಂಡ್ಯದ ಜನತೆ ಮಂಡ್ಯದಿಂದ ಕಬ್ಬು, ರಾಗಿ, ಭತ್ತ ಹಾಗೂ ಕಬ್ಬಿನ ಜಲ್ಲೆ ತಂದು ಅರ್ಪಿಸುತ್ತಿದ್ದಾರೆ. ನಿರ್ಮಾಪಕ ಸಂದೇಶ್ ನಾಗರಾಜ್ ಕೂಡ ಮಂಡ್ಯ ಜನರ ಜೊತೆ ಆಗಮಿಸಿದ್ದಾರೆ. ಸುಮಲತಾ ಅಂಬರೀಶ್ ಕೂಡ​​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅಂಬರೀಶ್ ಫೋಟೋಗೆ ಪುಷ್ಪನಮನ ಸಲ್ಲಿಸಿದರು.
ಇಂದು ನಗರದ ಅರಮನೆ ಮೈದಾನದಲ್ಲಿ ಅಂಬರೀಶ್​ ವೈಕುಂಠ ಸಮಾರಾಧನೆ ನಡೆಯುತ್ತಿದ್ದು ಈ ಕಾರ್ಯಕ್ರರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಆಗಮಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬರುವ ಎಲ್ಲಾ  ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಪೂಜೆಯ ನಂತರ ಭೋಜನ ಶುರುವಾಗಿದೆ. ವಿಶೇಷ ಎಂದರೆ ಅಂಬರೀಶ್ ಪುತ್ರ ಅಭಿಷೇಕ್ ಅವರು ಅಭಿಮಾನಿಗಳಿಗೆ ಖುದ್ದಾಗಿ ಊಟ ಬಡಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಿಸಿದ್ದಾರೆ.
ವೈಕುಂಠ ಸಮಾರಾಧನೆಗೆ ವೆಜ್​ ಊಟ ತಯಾರಿಸಲಾಗಿದೆ.

ರಾಗಿ ಮುದ್ದೆ, ಕಾಳು ಗೊಜ್ಜು (ವೆಜ್), ಹಲಸಿನ ಕಾಯಿ ಗೊಜ್ಜು, ಪೂರಿ, ತರಕಾರಿ ಸಾಗು, ಕೊಸಂಬರಿ, ಕಾರ್ನ್ ಮಸಾಲಾ, ಬೆಂಡಿ ಫ್ರೈ, ಆಲೂ ಫ್ರೈ, ವೆಜ್ ಧಮ್ ಬಿರಿಯಾನಿ, ರಾಯ್ತಾ, ಸ್ಪೆಶಲ್ ಮೈಸೂರ್ ಪಾಕ್, ಗೋಧಿ ಖೀರು, ಬೆಲ್ಲದ ಕಡುಬು, ಅನ್ನ ಸಾಂಬಾರ್​, ರಸಂ, ಮೊಸರು, ಹಪ್ಪಳ ಹಾಗೂ ಉಪ್ಪಿನ ಕಾಯಿ ತಯಾರಿಸಲಾಗಿದೆ.

8000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 100 ಜನ ಬಾಣಸಿಗರು ಖಾದ್ಯಗಳನ್ನ ತಯಾರು ಮಾಡಿದ್ದು, 300 ಜನ ಊಟ ಬಡಿಸುತ್ತಿದ್ದಾರೆ. ವಿಐಪಿಗಳಿಗೆ ಹಾಗೂ ಅಭಿಮಾನಿಗಳಿಗೆ ಎಲ್ಲರಿಗೂ ಒಂದೇ ರೀತಿಯ ಊಟದ ವ್ಯವಸ್ಥೆ ಮಾಡಲಾಗಿದೆ 12ಕ್ಕೆ ಶುರುವಾಗಿರೋ ಭೋಜನ ಕಾರ್ಯಕ್ರಮ ಸಂಜೆ 4ರವರೆಗೆ ನಡೆಯಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here