ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರು ಮಾಡಿದ್ದ ಮೀಟೂ ಆರೋಪದ ಬಗ್ಗೆ ಇಂದು ಕನ್ನಡ ಚಲನಚಿತ್ರ ವಾಣಿಜ್ಯಮಂಡಳಿಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು ಈ ಸಮಯದಲ್ಲಿ ಚಿತ್ರರಂಗದ ಹಿರಿಯರು ವಾಣಿಜ್ಯ ಮಂಡಳಿ ಸದಸ್ಯರು ಭಾಗಿಯಾಗಿದ್ದಾರೆ. ವಿಚಾರಣೆಗೆ ಅರ್ಜುನ್ ಸರ್ಜಾ , ಶೃತಿ‌ಹರಿಹರನ್ ಆಗಮಿಸಿದ್ದು ಅಂಬರೀಶ್ ಅವರ ಮುಂದೆ ಹಾಜರಾದರು. ಮೊದಲಿಗೆ ಶೃತಿ ಹರಿಹರನ್ ಅವರಿಗೆ ಅಂಬರೀಶ್ ಅವರು ಪ್ರಶ್ನೆ ಮಾಡಿದ್ದಾರೆ‌ .ಅಲ್ಲಮ್ಮ ಏನೇ ಸಮಸ್ಯೆ ಇದ್ದರೂ ವಾಣಿಜ್ಯ ಮಂಡಳಿ ಇದೆ ನೀನು ವಾಣಿಜ್ಯ ಮಂಡಳಿಯಲ್ಲಿ ಕಂಪ್ಲೆಂಟ್ ಕೊಡದೇ ಸೋಷಿಯಲ್ ಮೀಡಿಯಾಗಳಲ್ಲಿ ಯಾಕೆ ಆರೋಪ ಮಾಡಿದ್ದೀಯ ಎಂದು ಪ್ರಶ್ನಿಸಿದರು.

ನಂತರ ನೀನು ಯಾವ ಉದ್ದೇಶದಿಂದ ಈ ಆರೋಪ ಮಾಡುತ್ತಿದ್ದೀಯ ನಿನಗೆ ನಿಜವಾಗಿಯೂ ಅನ್ಯಾಯ ಆಗಿದೆಯಾ ಅಥವಾ ನಿನ್ನ ಆರೋಪದ ಹಿಂದೆ ಯಾರಾದರೂ ಇದ್ದಾರ ಎಂದು ಪ್ರಶ್ನಸಿದರು.ಅಷ್ಟೆ ಅಲ್ಲದೇ ನಿನಗೂ ನಟ ಚೇತನ್ ಗೂ ಏನು ಸಂಬಂದ್ ? ಅವರು‌ ಯಾಕೆ ಇಂದಿನ ಸಭೆಗೆ ಬಂದಿಲ್ಲ ? ಅವನೇಕೆ ನಿನ್ನ ವಿಷಯದಲ್ಲಿ ಮೂಗು ತೂರಿಸಬೇಕು ಎಂದು ಪ್ರಶ್ನಿಸಿದರು.ಆ ನಂತರ ಅರ್ಜುನ್ ಸರ್ಜಾ ಆಗಮಿಸಿದಾಗ ನನ್ನ ಕುಟುಂಬದವರು ತಲೆ ಎತ್ತಿಕೊಂಡು ಓಡಾಡದಂತೆ ಈಕೆ ಇಂದು ನನಗೆ ಮಾಡಿದ್ದಾಳೆ.

ನಾನು‌ ಇವರ ಜೊತೆ ಸಂಧಾನ ಮಾಡಿಕೊಳ್ಳುವ ಮಾತೇ ಇಲ್ಲ ಈಕೆಗೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ ಐದು ಕೋಟಿ ಪರಿಹಾರ ನೀಡುವ ತನಕ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅರ್ಜುನ್ ಸರ್ಜಾ ಆಕ್ರೋಶ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಇಬ್ಬರನ್ನೂ ಒಟ್ಟಿಗೆ ಕೂರಿಸಿಕೊಂಡು ಸಂಧಾನ ಮಾಡಲು ಸಾಧ್ಯವಾಗದ ಕಾರಣ ಇಬ್ಬರನ್ನೂ ಪ್ರತ್ಯೇಕ ಕೊಠಡಿಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ವಿಚಾರಣೆ ನಡೆಸುತ್ತಿದ್ದಾರೆ ಎಂದು  ತಿಳಿದು ಬಂದಿದೆ.ಸದ್ಯ ಇನ್ನೂ ವಣಿಜ್ಯ  ಮಂಡಳಿ ಯಲ್ಲಿ ಸಭೆ ನಡೆಯುತ್ತಿದ್ದು ಇದು ಹೇಗೆ ಅಂತಿಮ‌ಕಾಣಲಿದೆ ಕಾದು ನೋಡಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here