ಬಾರೀ ಕುತೂಹಲ ಹುಟ್ಟಿಸಿದ್ದ ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದ ಅರ್ಜುನ್ ಸರ್ಜ ಮತ್ತು ಶೃತಿ ಹರಿಹರನ್ ನಡುವಿನ ಸಂಧಾನ ಸಭೆ ವಿಪಲವಾಗಿದೆ. ಇಬ್ಬರನ್ನೂ ಸೇರಿಸುವ ಮನಸ್ಸಿನಿಂದ ವಾಣಿಜ್ಯಮಂಡಳಿ ಸಭೆ ಕರೆದಿದ್ದರು. ಈ ಸಭೆಯ ನೇತೃತ್ವ ವಹಿಸಿದ್ದ  ರೆಬೆಲ್ ಸ್ಟಾರ್ ಅಂಬರೀಶ್ ಅವರು ಮೊದಲಿಗೆ ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಅವರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು‌. ನಂತರ ಇಬ್ಬರನ್ನೂ ಒಟ್ಟುಗೂಡಿಸುವ ಮಾತುಗಳನ್ನು ಇಬ್ಬರಿಗೂ ಅಂಬರೀಶ್ ಅವರು ಬುದ್ದಿ ಮಾತುಗಳನ್ನು ಹೇಳಿದ್ದಾರೆ. ಈ ಸಭೆಯಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ  ಮಂಡಳಿಯ ಅಧ್ಯಕ್ಷರಾದ ಚಿನ್ನೇಗೌಡರು , ಸಾರಾ ಗೋವಿಂದು , ಮುನಿರತ್ನ ,ರಾಕ್ ಲೈನ್ ವೆಂಕಟೇಶ್ , ಲೋಕನಾಥ್ ,   ದೊಡ್ಡಣ್ಣ ಸೇರಿದಂತೆ ಹಲವಾರು ಗಣ್ಯರು ಆಗಮಿಸಿಧ್ದರು.

ಮೊದಲಿಗೆ ಅಂಬರೀಶ್ ಅವರು  ಶೃತಿ ಹರಿಹರನ್ ಜೊತೆ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ ನಡೆದ ಘಟನೆಯ ಸಂಪೂರ್ಣ ವಿವರ ಪಡೆದರು. ಈ ಸಮಯದಲ್ಲಿ ಅಂಬರೀಶ್ ಅವರು ಶೃತಿ ಹರಿಹರನ್ ಅವರಿಗೆ ನೀವು ವಾಣಿಜ್ಯ ಮಂಡಳಿಗೆ ದೂರು ನೀಡದೇ ಏಕಾಏಕಿ ಸೋಷಿಯಲ್ ಮೀಡಿಯಾಗಳಲ್ಲಿ ನಿಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ತಪ್ಪು ಎಂದಿದ್ದಾರೆ‌ . ನಂತರ  ಅರ್ಜುನ್ ಸರ್ಜಾ ಅವರ ಜೊತೆ ಮಾತುಕತೆ ನಡೆಸಿದ ಅಂಬರೀಶ್ ಅವರು ನಡೆದ ಘಟನೆಯ ಪೂರ್ಣ ವಿವರ ಪಡೆದರು ನಂತರ ಅರ್ಜುನ್ ಸರ್ಜಾ ಅವರು ನಾನು ತಪ್ಪು ಮಾಡಿಲ್ಲ ಎಂದು ಅಂಬರೀಶ್ ಅವರಿಗೆ ತಮ್ಮ ಅಭಿಪ್ರಾಯ ತಿಳಿಸಿದರು.

ಇಬ್ಬರ ಅಭಿಪ್ರಾಯ ಆಲಿಸಿದ ಅಂಬರೀಶ್ ಅವರು ಇಬ್ಬರಿಗೂ ಸಂಧಾನ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅಂಬರೀಶ್ ಅವರು ನಾನು ಇಬ್ಬರಿಗೂ ಹೊಂದಾಣಿಕೆ ಮಾಡಿಕೊಂಡು ಸೈಲೆಂಟ್ ಆಗಿರುವಂತೆ ತಿಳಿಸಿದ್ದೇನೆ.ಆದರೆ ಇದಕ್ಕೆ ಅರ್ಜುನ್ ಸರ್ಜಾ ಹಾಗೂ ಶೃತಿ‌ಹರಿಹರನ್ ಇಬ್ಬರಿಂದಲೂ ಪೂರಕ ಅಭಿಪ್ರಾಯ ಬಂದಿಲ್ಲ. ಹೀಗಾಗಿ ಅವರಿಬ್ಬರೂ ಕೋರ್ಟ್ ನಲ್ಲಿ ಸಮಸ್ಯೆ ಪರಿಹರಿಸಿಕೊಳ್ಳುತ್ತೇವೆ ಎಂದು ಅವರಿಬ್ಬರೂ ತಿಳಿಸಿದ್ದಾರೆ‌. ಅವರಿಬ್ಬರ ನಡುವೆ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ . ಈಗ ಪ್ರಕರಣ ಕೋರ್ಟ್ ನಲ್ಲಿದೆ ಕೋರ್ಟ್ ಸಮಸ್ಯೆ ಬಗೆಹರಿಸುತ್ತದೆ.

ನಾನು ಸುಪ್ರೀಂ ಅಲ್ಲ. ನಾನು ಇವರಿಬ್ಬರ ಸಮಸ್ಯೆ ಬಗೆಹರಿಸಲೆಂದೇ ಸಂಧಾನ ಸಭೆ ನಡೆಸಿದ್ದೇವೆ.‌ ಆದರೆ ಮುಂದೇನಾಗುತ್ತದೆ ನೋಡಬೇಕು. ಇದಕ್ಕೆ ರಾಜಕೀಯದ ಲೇಪನ ಅಥವಾ ಜಾತಿ ಧರ್ಮದ ಲೇಪನ ಬೇಡ , ಅವರು ನಮ್ಮ‌ ಒಪ್ಪಂದಕ್ಕೆ ಬರುತ್ತಿಲ್ಲ ಎಂದರು. ಈ ಘಟನೆಗೆ ಇಬ್ಬರು ಕನ್ನಡ ಸ್ಟಾರ್ ಗಳು ಸಾಥ್ ಕೊಟ್ಟಿದ್ದಾರೆ ಎಂಬುದು ನಿರಾಧಾರ. ಈ ಘಟನೆ ಬಗ್ಗೆ ಅರ್ಜುನ್ ಸರ್ಜಾ ಆಗಲಿ‌ ಶೃತಿ‌ಹರಿಹರನ್ ಆಗಲಿ ನನಗೆ ಯಾವುದೇ ಸಾಕ್ಷಿ ಒದಗಿಸಿಲ್ಲ. ಇನ್ನು ಫೈರ್ ಸಂಸ್ಥೆಯ ಬಗ್ಗೆ ಮಾತನಾಡಿದ ಅಂಬರೀಶ್ ಅವರು ಅದರಿಂದ ಪ್ರಿಯಾಂಕ ಉಪೇಂದ್ರ ಅವರು ಹೊರಗೆ ಬಂದಿದ್ದಾರೆ ಎಂದರೆ ಆ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರ್ಥ ಎಂದು ಅಂಬರೀಶ್ ತಿಳಿಸಿದರು.

ಚಿತ್ರರಂಗದ ಇತಿಹಾಸದಲ್ಲೇ ಮೊದಲಬಾರಿಗೆ ಲೈಂಗಿಕ ಕಿರುಕುಳ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.  ಇದರಿಂದ ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಬರುತ್ತದೆ ಎಂಬುದು ಸುಳ್ಳು ಎಂದು ಅಂಬರೀಶ್ ತಿಳಿಸಿದರು.ನಾನು ಯಾರ ಪರವಾಗಿಯೂ ಇರುವುದಿಲ್ಲ ,  ಕೊನೆಯದಾಗಿ  ಅರ್ಜುನ್ ಸರ್ಜಾ ಹಾಗೂ ಶೃತಿ  ಹರಿಹರನ್ ಇಬ್ಬರಿಗೂ ಶೇಕ್ ಹ್ಯಾಂಡ್ ಮಾಡಿ ಒಂದಾಗುವಂತೆ ಕೊನೆಯದಾಗಿ‌ ಹೇಳಿ‌ ಕಳುಹಿಸಿದ್ದೇನೆ  ಉಳಿದದ್ದು ಅವರಿಬ್ಬರಿಗೆ ಬಿಟ್ಟ ವಿಷಯ ಎಂದು ರೆಬೆಲ್ ಸ್ಟಾರ್ ಅಂಬರೀಶ್ ತಿಳಿಸಿದರು.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here