ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ನಡೆದ ಐಟಿ ದಾಳಿ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರ ಮನೆಗಳ ಮೇಲೆ ಸರ್ಚ್ ಆಗಿತ್ತು. ಈ ಸಮಯದಲ್ಲಿ ಸ್ಟಾರ್ ನಟರು ತಮ್ಮದೇ ರೀತಿಯಲ್ಲಿ ಐಟಿ ದಾಳಿ ಸಮರ್ಥನೆ ಮಾಡಿಕೊಂಡಿದ್ದರು‌. ರಾಕಿಂಗ್ ಸ್ಟಾರ್ ಯಶ್ ಅವರ ನಿವಾಸದಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ಸಾಕಷ್ಟು ಹೆಚ್ಚು ಸುದ್ದಿ ಮಾಡಿತ್ತು. ಅದರಲ್ಲೂ ಒಂದು ಮಾಧ್ಯಮ ಮಾತ್ರ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ತಿರುಗಿ ಬಿದ್ದಿತ್ತು.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಮರ್ಶೆಗಳು ಹರಿದಾಡಿದ್ದವು. ಈ ಬಗ್ಗೆ ನೆನ್ನೆ ರಾಕಿಂಗ್ ಸ್ಟಾರ್ ಯಶ್ ಸಹ ಅಸಮಧಾನ ಹೊರಹಾಕಿದ್ದರು. ಐಟಿ‌ ವಿಚಾರಣೆಗೆ ಆಗಮಿಸಿದ್ದ ರಾಕಿಂಗ್ ಸ್ಟಾರ್ ಯಶ್ ಅವರು ಸ್ವಲ್ಪ ಗರಂ‌ ಆಗಿಯೇ ಮಾಧ್ಯಮಗಳ ವಿರುದ್ದ ಸಿಡಿದೆದ್ದರು.

ನಿಮಗೆ ಎಲ್ಲವನ್ನೂ ತಿಳಿಸಬೇಕೆ. ಇದು ಆದಾಯ ತೆರಿಗೆ ಮತ್ತು ನಮ್ಮ ನಡುವಿನ ವಿಷಯ ನಮಗೆ ಅವರು ಕೆಲವು ಸಲಹೆ ಸೂಚನೆಗಳನ್ನು ‌ನೀಡಿದ್ದಾರೆ ಅದನ್ನು ನಾವು ಪಾಲಿಸುತ್ತೇವೆ ಅದು ಬಿಟ್ಟು ನಿಮಗೆ ಬಂದಂತೆ ತೋರಿಸಿದರೆ ಅದಕ್ಕೆ ಕೇರ್ ಮಾಡಲ್ಲ ಎಂದು ಮಾಧ್ಯಮಗಳಿಗೆ ಯಶ್ ತಿರುಗೇಟು ಕೊಟ್ಟಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ಹೇಳಿಕೆಗೆ ಯಶ್ ಅಭಿಮಾನಿಗಳು ಬಹು ಪರಾಕ್ ಎಂದಿದ್ದರು. ಇದೀಗ ಮೈಸೂರು ಮತ್ತು ಕೊಡಗು ಭಾಗದ ಭಾರತೀಯ ಜನತಾ ಪಕ್ಷದ ಸಂಸದ ಪ್ರತಾಪ್ ಸಿಂಹ ಅವರು

ಯಶ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಪ್ರತಾಪ್ ಸಿಂಹ ಅವರು ಮೊದಲು ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಇದ್ದದ್ದಿದ್ದಂಗೆ ಹೇಳಿಕೆ ಕೊಡುತ್ತಿದ್ದರು. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಸಹ ಅಂಬರೀಶ್ ರೀತಿಯಲ್ಲೇ ನೇರವಾಗಿ ಮಾತನಾಡುವ ವ್ಯಕ್ತಿತ್ವ ರೂಡಿಸಿಕೊಂಡಿದ್ದಾರೆ ಎಂದು ಯಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ಅಂಬರೀಷಣ್ಣನ ನಂತರ ಯಾರಿಗೂ ಕ್ಯಾರೇ ಅನ್ನದೆ ಅನಿಸಿದ್ದು ಹೇಳಿ ಮಾಧ್ಯಮಗಳಿಗೂ ಮಂಗಳಾರತಿ ಮಾಡುವ ಏಕಮಾತ್ರ ವ್ಯಕ್ತಿ ಯಶ್ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here