ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಬರೀಶ್ ಅವರಿಗೆ ಬಿ ಫಾರಂ ಕೊಡಲು ಕಾಂಗ್ರೆಸ್ ಘಟಾನುಘಟಿ ನಾಯಕರುಗಳು ಅಲೆದು ಅಲೆದು ಸುಸ್ತಾಗಿದ್ದಾರೆ. ಆದರೆ ಅಂಬರೀಶ್ ಮಾತ್ರ ಯಾರ ಕೈಗು ಸಿಗದೇ ಎಸ್ಕೇಪ್ ಆಗುತ್ತಿದ್ದ ಬಹಳ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅತ್ತ ಅಂಬರೀಶ್ ಆಪ್ತರು ಮತ್ತು ಕಾಂಗ್ರೆಸ್ ಮುಖಂಡರು ರೆಬೆಲ್ ಸ್ಟಾರ್ ಅಂಬರೀಶ್ ಅವರಿಗಾಗಿ ಹತ್ತಾರು ಕಾರುಗಳಲ್ಲಿ ಮೈಸೂರು ಹಾಗೂ ಮಂಡ್ಯದ ಪ್ರತಿ ಹೋಟೆಲ್ ಗಳಲ್ಲೂ ಅಣ್ಣಾ ಇದಾರ ಅಣ್ಣಾರ ಎಂದು ಬೀದಿ ಬೀದಿ ತಿರಿಗುತ್ತಿದ್ದಾರೆ.
ಈ ಬಗ್ಗೆ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಮಾತನಾಡಿದ್ದು ಕೊನೇಕ್ಷಣದವರೆಗು ಅಂಬರೀಶ್ ಅಣ್ಣ ನಿಲ್ಲುವಂತೆ ಒತ್ತಾಯಿಸುತ್ತೇವೆ ಒಂದು ವೇಳೆ ಅವರು ನಿಲ್ಲಲಿಲ್ಲ ಎಂದರೆ ನಾನೇ ನಿಂತ್ಕೊತಿನಿ ಎಂದು ಹೇಳುವ ಮೂಲಕ ಮಂಡ್ಯ ಕಾಂಗ್ರೆಸ್ ನಲ್ಲಿ ಸದ್ದು ಮಾಡುತ್ತಿದ್ದಾರೆ.
ಇನ್ನೊಂದಡೆ ಅಂಬರೀಶ್ ಬಿ ಫಾರಂ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಬರೀಶ್ ಮನೆಗೆ ಬಿ ಫಾರಂ ಕಳಿಸಿಕೊಟ್ಟಿದ್ದೇವೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಟಿಕೇಟ್ ಘೋಷಿಸಿದೆ. ಇದರ ಮೇಲೆ ನಿಂತ್ಕೊಳೋದು ಬಿಡೋದು ಅವನ ಇಷ್ಟ ಎಂದು ಖಡಕ್ ಆಗಿ ಹೇಳಿದ್ದ ಸಿದ್ದರಾಮಯ್ಯ ಇಂದು ಇದ್ದಕ್ಕಿದ್ದಂತೆ ಮದ್ಯಾಹ್ನ ಅಂಬರೀಶ್ ಅವರನ್ನ ಮೀಟ್ ಮಾಡ್ತಿನಿ ಮಾತುಕತೆ ಮಾಡ್ತಿನಿ ಎಂದು ಹೇಳುವ ಮೂಲಕ ರೆಬೆಲ್ ಸ್ಟಾರ್ ಗೆ ತಲೆಭಾಗಿದ್ದಾರೆ. ಒಟ್ಟಾರೆ ಅಂಬರೀಶ್ ಹಠ ಬಿಡದೆ ಟಿಕೇಟ್ ತಗೊತಿಲ್ಲ , ಕಾಂಗ್ರೆಸ್ ಬಿಡ್ತಿಲ್ಲ ಹಂಗಾಗಿದೆ ಪರಿಸ್ಥಿತಿ
ವಸತಿ ಸಚಿವ ಸ್ಥಾನದಿಂದ ಅಂಬರೀಶ್ ಅವರನ್ನು ಏಕಾ ಏಕಿ ತೆಗೆದು ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಬರೀಶ್ ಕೊನೇ ಘಳಿಗೆಯಲ್ಲಿ ಸೇಡಿನ ಪಾಠ ಮಾಡಿದ್ದು ಮಂಗಳವಾರ ಇವೆಲ್ಲಾ ವಿವಾದಗಳಿಗೆ ತೆರೆಬೀಳಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here