ಮಂಡ್ಯ ಚುನಾವಣಾ ಕಣವು ಹೇಳಿಕೆಗಳ ಹಾಗೂ ಅವಹೇಳನದ ರಣವಾಗಿ ಮಾರ್ಪಡುತ್ತಿದೆ. ಸುಮಲತ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದ ಮೇಲೆ ಅವರ ಬೆಂಬಲವಾಗಿ ನಿಂತವರು ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇದೇ ಒಂದು ದೊಡ್ಡ ತಲೆ ನೋವಾಗಿ ಸಂಭವಿಸಿದೆ ಹಲವರಿಗೆ. ಸುಮಲತ ಹಾಗೂ ನಟರ ವಿರುದ್ಧ ವಾಗ್ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಇನ್ನು ಎಲ್ಲದಕ್ಕೂ ಬಹಳ ತಾಳ್ಮೆಯಿಂದ ಉತ್ತರ ನೀಡುತ್ತಾ ಬಂದಿದ್ದಾರೆ ಸುಮಲತ ಅವರು. ಅಲ್ಲದೆ ಸುಮಲತ ಅವರು ಹೇಳಿಕೆಗಳನ್ನು ಬಹಳ ತಾಳ್ಮೆಯಿಂದ ಹಾಗೂ ಆಲೋಚಿಸಿ ನೀಡುತ್ತಾ ಬರುತ್ತಿದ್ದಾರೆ. ಅವರು ಇಡುತ್ತಿರುವ ಹೆಜ್ಜೆಗಳನ್ನು ಹಲವರು ಅವಲೋಕಿಸುತ್ತಿದ್ದಾರೆ.

ಸುಮಲತ ಅವರು ನಿಖಿಲ್ ಕುಮಾರಸ್ವಾಮಿ ಅವರು ಎದುರುಬದುರಾಗಿ ಚುನಾವಣಾ ಕಣದಲ್ಲಿ ಇರುವುದರಿಂದ ಚುನಾವಣಾ ಕಾವು ಏರುತ್ತಲೇ ಇದೆ. ಹಲವು ಮುಖಂಡರು ನಟರ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡುತ್ತಾ ವಾಗ್ದಾಳಿಯನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತ ಅವರು ಮಾತನಾಡುತ್ತಾ ಜೆಡಿಎಸ್ ಗೆ ಸವಾಲೊಂದನ್ನು ಹಾಕಿದ್ದಾರೆ. ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಶ್ ಹಾಗೂ ದರ್ಶನ್ ಅವರ ಬಗ್ಗೆ ಮೂದಲಿಸಿ ವ್ಯಂಗ್ಯವಾದ ಹೇಳಿಕೆ ನೀಡಿರುವುದಿಂದ ಸುಮಲತ ಅವರು ಕೂಡಾ ಈಗ ಜೆಡಿಎಸ್ ನಾಯಕರಿಗೆ ಸವಾಲು ಹಾಕಿದ್ದಾರೆ.

ಸುಮಲತ ಅವರು ಮಂಡ್ಯದಲ್ಲಿ ನಮ್ಮ ಕುಟುಂಬ, ಅಂಬರೀಶ್, ಅಭಿಷೇಕ್ , ಹಾಗೂ ದರ್ಶನ್ ಯಶ್ ಹೆಸರು ಹೇಳದೆ ಜೆಡಿಎಸ್ ನವರು ಪ್ರಚಾರ ನಡೆಸಿಕೊಳ್ಳಲಿ ಎಂದು ನೇರವಾಗಿ ಸವಾಲೊಂದನ್ನು ಎಸೆದಿದ್ದಾರೆ. ಸುಮಲತ ಅವರು ಕೊಟ್ಟಿರುವ ಸವಾಲನ್ನು ಜೆಡಿಎಸ್ ನಾಯಕರು ಯಾವ ರೀತಿ ಸ್ವೀಕರಿಸುವರು? ಇನ್ನೂ ಹೆಚ್ಚಿನ ಹೇಳಿಕೆ ನೀಡುವರೋ? ಅಥವಾ ಇನ್ನು ಅವರ ಹೆಸರು ಬಳಸದೆ ಪ್ರಚಾರ ಕಾರ್ಯದಲ್ಲಿ ತೊಡಗುವರೋ ನಾವೆಲ್ಲಾ ಕಾದು ನೋಡಬೇಕಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here