ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ.ಇದಕ್ಕೆ ಸಂಬಂಧಪಟ್ಟಂತೆ ಸಚಿವ ಸಂಪುಟದ ಅನುಮೋದನೆ ಕೂಡಾ ಈಗಾಗಲೇ ದೊರಿತಿದ್ದು , ಒಂದು ಬಹಳ ಮಹತ್ವವಾದ ನಿರ್ಣಯವನ್ನು ಕೈಗೊಳ್ಳಲು ಮುಂದಾಗಿದೆ. ರಸ್ತೆ ನಿಯಮಗಳನ್ನು ಯಾರಾದರೂ ಉಲ್ಲಂಘಿಸಿದರೆ ನಿಯಮಗಳನ್ನು ಮತ್ತಷ್ಟು ಕಟ್ಟು ನಿಟ್ಟು ಅಥವಾ ದಂಡವನ್ನು ಹತ್ತು ಪಟ್ಟು ಹೆಚ್ಚಿಸಲಾಗಿದೆ. ಈ ಹೊಸ ನಿಯಮದಲ್ಲಿ ಒಂದು ಮಹತ್ವದ ನಿರ್ಣಯಕ್ಕೂ ಕೂಡಾ ಮುಂದಾಗಿದೆ ಸರ್ಕಾರ.

ಇಷ್ಟಕ್ಕೂ ಆ ನಿಯಮ ಏನೆಂದರೆ ಇನ್ನು ಮುಂದೆ ಆ್ಯಂಬುಲೆನ್ಸ್ ವಾಹನಕ್ಕೆ ಅಡ್ಡ ಬಂದರೆ ಬರೋಬ್ಬರಿ 10,000 ರೂಪಾಯಿಗಳ ದಂಡವನ್ನು ವಿಧಿಸುವ ಕಾನೂನನ್ನು ರಚಿಸಲು ಮುಂದಾಗಿದೆ ಕೇಂದ್ರ ಸರ್ಕಾರ. ಮೋಟಾರು ವಾಹನ ಕಾಯ್ದೆಗೆ ಇನ್ನು ರಾಜ್ಯ ಸರ್ಕಾರದ ಅಂಕಿತ ಬಾಕಿಯಿದ್ದು,ಅದು ದೊರತರೆ ಇನ್ನು ಮುಂದೆ ಆ್ಯಂಬುಲೆನ್ಸ್ ಗೆ ಅಡ್ಡ ಬರುವ ಮಂದಿಗೆ ಕಾದಿದೆ ದೊಡ್ಡ ಮೊತ್ತದ ದಂಡ ಎಂಬುದಂತೂ ನಿಜ. ಶೀಘ್ರದಲ್ಲೇ ಈ ಕಾನೂನು ಜಾರಿಯಾಗಲಿದೆ. ಇದರಿಂದ ವಾಹನವನ್ನು ಆ್ಯಂಬುಲೆನ್ಸ್ ವಾಹನಕ್ಕೆ ತೊಂದರೆ ಉಂಟುಮಾಡುವ ಮಂದಿ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ.

ತುರ್ತು ಸೇವೆಗೆ ಸಂಬಂಧಿಸಿದಂತೆ ಚಲಿಸುವ ವಾಹನಗಳಿಗೆ ಅಡ್ಡಿ ಪಡಿಸುವುದು ಹಾಗೂ ಮುಂದೆ ಚಲಿಸುವುದು ಮಾಡಿದರೆ ಹತ್ತು ಸಾವಿರ ದಂಡ ತೆರಬೇಕಾಗುವುದು. ಕೇವಲ ಮುಂದೆ ಮಾತ್ರವಲ್ಲ ಆ್ಯಂಬುಲೆನ್ಸ್ ವಾಹನದ ಹಿಂದೆ ಸಂಚರಿಸುವುದು ಕೂಡಾ ತಪ್ಪು‌. ಇನ್ನು ಮುಂದೆ ಕಾನೂನು ತಿದ್ದುಪಡಿಗಳನ್ನು ತಿಳಿದುಕೊಂಡು ವಾಹನ ಚಲಾಯಿಸುವುದು ಸೂಕ್ತ. ಇಲ್ಲವಾದಲ್ಲಿ ದೊಡ್ಡ ಮೊತ್ತದ ದಂಡ ತೆರಬೇಕಾಗುವುದು ಮಾತ್ರ ನಿಜ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here