ಅಮೇರಿಕಾ  ಸೇನೆ ತನ್ನ ಬತ್ತಳಿಕೆಗೆ ಹೊಸ ಹೊಸ ಆವಿಷ್ಕಾರಗಳನ್ನು ಸೇರಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೆ ಹೈಪರ್ ಸಾನಿಕ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಕುರಿತು ರಕ್ಷಣಾ ಮೂಲಗಳನ್ನುಲ್ಲೇಖಿಸಿ ಅಲ್ಲಿನ ವಾಹಿನಿಯೊಂದು ಪ್ರಸಾರ ಮಾಡಿದೆ. ನಿಖರವಾಗಿ ಗುರಿ ಮುಟ್ಟಬಲ್ಲ ಈ ಕ್ಷಿಪಣಿ ಶಬ್ದದ ವೇಗಕ್ಕಿಂತ ಹದಿನೇಳು ಪಟ್ಟು ವೇಗವಾಗಿ ಚಲಿಸಲಿದೆ. ಶಬ್ದ ಒಂದು ಸೆಕೆಂಡಿಗೆ ೩೪೩ ಮೀಟರ್ ಕ್ರಮಿಸುತ್ತದೆ.

ಶಬ್ದದ ವೇಗಕ್ಕಿಂತ ಹೆಚ್ಚು ವೇಗ ಕ್ರಮಿಸಿದರೆ ಅದನ್ನು ಸೂಪರ್ ಸಾನಿಕ್ ಎನ್ನುತ್ತಾರೆ. ಶಬ್ದದ ವೇಗಕ್ಕಿಂತ ಐದು ಪಟ್ಟಿನ ಹೆಚ್ಚು ವೇಗವನ್ನು ಹೈಪರ್ ಸಾನಿಕ್ ಎನ್ನಲಾಗುತ್ತದೆ. ಈಗ ಅಮೆರಿಕ ಪ್ರಯೋಗಿಸಿರುವ ಕ್ಷಿಪಣಿಯನ್ನು ಸೂಪರ್ ಡೂಪರ್ ಹೈಪರ್ ಸಾನಿಕ್ ಎಂದು ಬಣ್ಣಿಸಿಕೊಂಡಿದೆ.

ಮಾರ್ಚ್ ತಿಂಗಳಲ್ಲೇ ಪೆಸಿಫಿಕ್ ಸಮುದ್ರದಲ್ಲಿ ಈ ಪ್ರಯೋಗವನ್ನು ಅದು ನಡೆಸಿದೆ. ಆದರೆ ಇವು ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಪೆಸಿಫಿಕ್ ಪ್ರದೇಶದಲ್ಲಿ ಇಂತಹ ಕನಿಷ್ಟ ೪೦ ಪರೀಕ್ಷೆಗಳನ್ನು ನಡೆಸುವ ಚಿಂತನೆಯನ್ನು ಅಮೆರಿಕ ನಡೆಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here