ಅಮೆರಿಕ ಮತ್ತು ಇರಾನಿನ ನಡುವಿ‌ನ ಸಂಘರ್ಷ ತಾರಕಕ್ಕೇರುತ್ತಿದೆ. ವಿಶ್ವದಾದ್ಯಂತ ಈ ದೇಶಗಳ ನಡುವಿನ ವಿವಾದವು ಈಗ ಚರ್ಚಗೆ ಕಾರಣವಾಗಿದೆ. ಇನ್ನು ಅಮೆರಿಕದ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನಿನ ಮೇಜರ್ ಜನರಲ್ ಕಾಸೆಮ್ ಸೊಲೈಮಾನಿ ಸಾವಿಗೆ ಪ್ರತಿಯಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅವರ ತಲೆಗೆ 80 ಮಿಲಿಯನ್ ಡಾಲರ್ ಬಹುಮಾನವನ್ನು ನೀಡಲಾಗುವುದು ಎಂದು ಇರಾನ್ ಘೋಷಣೆ ಮಾಡಿರುವುದಾಗಿ ಮಾಧ್ಯಮಗಳ ವರದಿಯಲ್ಲಿ ತಿಳಿಸಿವೆ‌. ಇರಾನಿನ ಮೇಜರ್ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಇರಾನಿನ ದೂರದರ್ಶನದಲ್ಲಿ ಇಂತಹುದೊಂದು ಘೋಷಣೆಯ ಬಗ್ಗೆ ವರದಿಯಾಗಿದೆ.

ಇರಾನಿನನಲ್ಲಿ 80 ಮಿಲಿಯನ್ ಇರಾನಿಯರಿದ್ದು, ಪ್ರತಿಯೊಬ್ಬ ನಾಗರಿಕನು ತಲಾ $ 1 ಅನ್ನು ನೀಡಿದರೂ ಸಾಕು, ಆ ಹಣವು ಯುಎಸ್ ಅಧ್ಯಕ್ಷರನ್ನು ಕೊಂದವರಿಗೆ ಹೋಗುತ್ತದೆ ಎಂದು ಒಂದು ವಿಶ್ವ ವಿಖ್ಯಾತ ವರದಿ ಮಾದ್ಯಮವು ತನ್ನ ವರದಿಯಲ್ಲಿ ತಿಳಿಸಿದೆ. ಟ್ರಂಪ್ ಆದೇಶದ ಹಿನ್ನೆಲೆಯಲ್ಲಿ ಜನವರಿ 3 ರಂದು ಯುಎಸ್ ಡ್ರೋನ್ ದಾಳಿಯು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ನ ಕಡ್ಸ್ ಫೋರ್ಸ್ನ ಕಮಾಂಡರ್ ಸೊಲೈಮಾನಿ ಮತ್ತು ಇರಾಕ್ನ ಅರೆಸೈನಿಕ ಹಶ್ದ್ ಶಾಬಿ ಪಡೆಗಳ ಉಪ ಮುಖ್ಯಸ್ಥ ಅಬು ಮಹ್ದಿ ಅಲ್-ಮುಹಂದಿಸ್ ಅವರು ಕೊಲ್ಲಲ್ಪಟ್ಟಿದ್ದರು.

ಈ ಡ್ರೋಣ್ ಧಾಳಿಯು ಬಾಗ್ದಾದ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ನಡೆದಿತ್ತು. ಈ ದಾಳಿಯ ವಿರುದ್ಧ ಇರಾನ್‌ನಲ್ಲಿ ವ್ಯಾಪಕ ಖಂಡನೆಗೆ ವ್ಯಕ್ತವಾಗಿದ್ದು, ಇರಾನಿನ ಸರ್ವೋಚ್ಚ ನ ಅಯತೊಲ್ಲಾ ಅಲಿ ಖಮೇನಿ ಮತ್ತು ಅಧ್ಯಕ್ಷ ಹಸನ್ ರೂಹಾನಿ ಯುಎಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿದ್ದು, ಇದೀಗ ಎರಡು ದೇಶಗಳು ಕೂಡಾ ಸೈಬರ್ ವಾರ್ ಕೂಡಾ ಮಾಡಲು ಸಜ್ಜಾಗಿದೆ ಎನ್ನುವಂತಿದೆ ಪರಿಸ್ಥಿತಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here