ವಿಶ್ವಾದ್ಯಂತ ಕೋವಿಡ್ 19 ರುದ್ರನರ್ತನ ತೋರುತ್ತಿದೆ. ಅಮೆರಿಕದಲ್ಲೂ ಸಹ ಕೋವಿಡ್ ಗೆ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಬಲಿಯಾಗಿದ್ದು ಅಮೆರಿಕಾದ ಜನತೆ ಆತಂಕದಲ್ಲಿದ್ದಾರೆ. ಈಗಾಗಲೇ ಅಮೆರಿಕಾದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಏಪ್ರಿಲ್ 30ರ ತನಕ ಲಾಕ್ ಡೌನ್  ಮುಂದುವರಿಯಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ತಿಳಿಸಿದ್ದಾರೆ. ಈಗಾಗಲೇ ಅಮೆರಿಕಾ ದೇಶವೊಂದರಲ್ಲಿ ಮಹಾಮಾರಿ ಕೋವಿಡ್ 19 ಗೆ  ಸುಮಾರು 4020ಕ್ಕೂ ಹೆಚ್ಚು ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ . ಈಗಾಗಲೇ ಬೆಚ್ಚಿಬಿದ್ದಿರುವ ಅಮೆರಿಕ ಜನತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ಅಮೇರಿಕಾದ ಶ್ವೇತಭವನದಲ್ಲಿ ಮಾತನಾಡಿರುವ ಅಮೆರಿಕಾದ ಅಧ್ಯಕ್ಷರು”ಮುಂದಿನ ಎರಡು ವಾರ ಅಮೆರಿಕದ ಪಾಲಿಗೆ ಭೀಕರವಾಗಿರಲಿವೆ. 1.50 ರಿಂದ 2.50 ಲಕ್ಷ ಜನ ಕೊರೊನಾ ವೈರಸ್‌ಗೆ ಬಲಿಯಾಗಬಹುದು. ಎಚ್ಚರಿಕೆಯಿಂದ ಇರಿ ಎಂದು ಟ್ರಂಪ್ ಭಾವುಕರಾಗಿ ಅಮೆರಿಕದ ನಾಗರಿಕರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ಎರಡು ವಾರಗಳು ಅಮೆರಿಕನ್ನರ ಪಾಲಿಗೆ ಅತ್ಯಂತ

ಕಠಿಣವಾದದ್ದು, ಈ ವೇಳೆಯಲ್ಲಿ ನೀವೆಲ್ಲರೂ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಜಾಗರೂಕತೆಯಿಂದ ಮನೆಯಲ್ಲಿ ಇರಬೇಕು ಎಂದು ಹೇಳಿದ್ದಾರೆ. ಮುಂದಿನ ಎರಡು ವಾರ ಅಮೆರಿಕದ ಪ್ರತಿಯೊಬ್ಬ ಪ್ರಜೆಯು ಸಹ ಎಚ್ಚರಿಕೆಯಿಂದ ಇರಬೇಕಾಗಿತ್ತು ಎಚ್ಚರಿಕೆ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here