ಇನ್ನು ಮುಂದೆ ಗರ್ಭಿಣಿಯರಿಗೆ ಅಮೆರಿಕಾದ ವೀಸಾ ನೀಡಲಾಗುವುದಿಲ್ಲವೆಂದು ಟ್ರಂಪ್ ಸರ್ಕಾರ ಕಟ್ಟು ನಿಟ್ಟಿನ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಟ್ರಂಪ್ ಅಮೆರಿಕ ಅಧ್ಯಕ್ಷ ಪದವಿ ಅಲಂಕರಿಸಿದ ನಂತರ ಅಮೆರಿಕ ವಲಸಿಗರ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ನೀತಿ ಎಲ್ಲರ ಗಮನಕ್ಕೂ ಬಂದಿತ್ತು. ಈಗ ಅದರದೇ ಭಾಗವಾಗಿ ಡೊನಾಲ್ಡ್ ಟ್ರಂಪ್ ಅವರ ಸರಕಾರ ಇನ್ನು ಮುಂದೆ ಗರ್ಭಿಣಿಯರಿಗೆ ವೀಸಾ ನೀಡುವುದಿಲ್ಲವೆಂದು ಆದೇಶವನ್ನು ಹೊರಡಿಸಿದ್ದು, ಗುರುವಾರ ಈ ಹೊಸ ನೀತಿ ಜಾರಿಯಾಗಿದೆ. ಇದು ನಿನ್ನೆಯಿಂದಲೇ ಜಾರಿಯಾಗಿದೆ ಕೂಡಾ.

ಅಮೆರಿಕಕ್ಕೆ ಗರ್ಭಿಣಿಯರು ಪ್ರವಾಸಕ್ಕೆ ಬರುತ್ತಿಲ್ಲ, ಬದಲಾಗಿ ಅವರು ಮಗುವಿಗೆ ಜನ್ಮ ನೀಡಲು ಬರುತ್ತಿದ್ದಾರೆ. ಅದಕ್ಕಾಗಿ ಜನನ ವೀಸಾವನ್ನು ತೆಗೆದುಕೊಳ್ಳುತ್ತಿದ್ದಾರೆ. ವೀಸಾ ದುರುಪಯೋಗವನ್ನು ತಪ್ಪಿಸಲು ಇಂತಹುದೊಂದು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಅಮೆರಿಕದಲ್ಲಿ ಜನಿಸಿದ ಮಗುವಿಗೆ ಅಮೆರಿಕದ ಪೌರತ್ವ ಸಿಗುತ್ತದೆ. ಆದ್ದರಿಂದಲೇ ಸುಲಭವಾಗಿ ಸಿಗುವ ಪೌರತ್ವ ಪಡೆಯಲು ಬರ್ತ್ ಟೂರಿಸಂ ಮಾಡುತ್ತಿದ್ದು, ಈ ಆರೋಪ ಹಲವು ವರ್ಷಗಳಿಂದ ಇದ್ದು, ಇತರೆ ಯಾವುದೇ ಸರ್ಕಾರ ಗಮನ ಹರಿಸಿರಲಿಲ್ಲ. ಆದರೆ ಟ್ರಂಪ್ ಅವರ ಸರ್ಕಾರ ಇದಕ್ಕೆ ಗಮನ ಹರಿಸಿದೆ ಎನ್ನಲಾಗಿದೆ.

ಅಮೆರಿಕದಲ್ಲಿ ವಲಸಿಗರಿಂದ ದೊಡ್ಡ ಸಮಸ್ಯೆ ಸೃಷ್ಟಿಯಾಗಿದ್ದು, ಇದರಿಂದ ಅಮೆರಿಕನ್ನರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಅದಕ್ಕೆ ಅಕ್ರಮ ವಲಸೆಗಾರರನ್ನು ನಿಯಂತ್ರಿಸುವುದಾಗಿ ಹಾಗೂ ದೇಶವನ್ನು ಮತ್ತಷ್ಟು ಭದ್ರಪಡಿಸುವುದಾಗಿ ಅವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದು, ಟ್ರಂಪ್ ಇದೀಗ ಮತ್ತೊಮ್ಮೆ ವಲಸಿಗರ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here