ಮುಂಬೈ : [3/28, 22:02] ಅಮೀರ್ ಖಾನ್ ಮಗಳು ಇರಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ. ತನ್ನ ಗೆಳೆಯನೊಂದಿಗೆ ಕ್ಲೋಸ್ ಆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅವರದೇ ‘ಇನ್‌ಸ್ಟಾಗ್ರಾಂ’ ಪೇಜ್‌ನಲಲ್ಲಿ ಹರಿದಾಡುತ್ತಿರುವ ಈ ಫೋಟೋಗಳ ಬಗ್ಗೆ ಸೋಷಿಯಲ್ ಮೀಡಿಯಾ ಜನರು ಭಾರಿ ಕುತೂಹಲ ವ್ಯಕ್ತ ಪಡಿಸುತ್ತಿದ್ದಾರೆ.
ಅಮೀರ್ ಮಗಳು ಇರಾ ಖಾನ್ ತನ್ನ ಗೆಳೆಯನೊಂದಿಗೆ ತಾನು ಮುತ್ತು ಪಡೆಯುತ್ತಿರುವ ಫೋಟವನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ಫೋಟೋ ನೋಡಿದವರು ಇವರಿಬ್ಬರೂ ಡೇಟ್ ಮಾಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುವಂತಾಗಿದೆ. ಈ ಫೋಟೋಗಳು ಈಗ ಭಾರಿ ವೈರಲ್ ಆಗಿವೆ. ಆದರೆ ಇದೇ ಗೆಳೆಯನೊಂದಿಗಿರುವ ಇರುವ ಸಾಕಷ್ಟು ಫೋಟೋಗಳನ್ನೂ ಅಪ್ಲೋಡ್ ಮಾಡಿದ್ದಾರೆ ಇರಾ ಖಾನ್.

ಇರಾ ಖಾನ್‌ಗೆ ಮುತ್ತು ಕೊಟ್ಟಿರುವ ಹುಡುಗನ ಹೆಸರು ವಿಶಾಲ್ ಎನ್ನಲಾಗಿದೆ. ನಟ, ಮ್ಯೂಸಿಕ್ ಕಂಪೋಸರ್ ಹಾಗೂ ನಿರ್ದೇಶಕ ಎಂದು ಗುರುತಿಸಲಾಗಿದ್ದು, ಅವರಿಬ್ಬರ ಡೇಟಿಂಗ್ ಬಗ್ಗೆಯಾಗಲೀ ಅಥವಾ ಅವರಿಬ್ಬರ ಸಂಬಂಧದ ಬಗ್ಗೆ ಮಿಕ್ಕ ಡೀಟೇಲ್ಸ್‌ಗಳಾಲೀ ಸದ್ಯಕ್ಕೆ ದೊರಕಿಲ್ಲ. ಒಟ್ಟಿನಲ್ಲಿ, ಸದ್ಯಕ್ಕೆ ಅವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಿಗರ ಕಣ್ಣಿಗೆ ಬಿದ್ದು ಸಖತ್ ಚರ್ಚೆಗೆ ಗ್ರಾಸವಾಗಿದೆ. ಅವರಿಬ್ಬರ ರಿಲೇಶನ್‌ಶಿಪ್ ಅದೆಲ್ಲಿಗೋ ಮುಟ್ಟುತ್ತೋ ಏನೋ ನೋಡಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here