ಕೆಪಿಸಿಸಿ ಕಛೇರಿಯಲ್ಲಿ  ಸುದ್ದಿ ಗೋಷ್ಠಿಯೊಂದನ್ನು ನಡೆಸಿರುವ ಕಾಂಗ್ರೆಸ್ ನ ಹಿರಿಯ ನಾಯಕರಾದ ವಿ.ಎಸ್.ಉಗ್ರಪ್ಪನವರು ಕೇಂದ್ರ ಸರ್ಕಾರದ ವಿರುದ್ಧ ಗುಡುಗುತ್ತಾ, ಕೇಂದ್ರದ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಮಾತನಾಡುತ್ತಾ ಮೋದಿಯ ನಂತರ ಅಮಿತ್ ಶಾ ಅವರು ಪ್ರಧಾನಿಯಾಗಲು ಕನಸನ್ನು ಕಾಣುತ್ತಿದ್ದಾರೆ ಎಂದು ಹೇಳಿದ್ದು, ಹುಬ್ಬಳ್ಳಿ ಗೆ ಬಂದಿದ್ದ ಅಮಿತ್ ಶಾ ಅವರು ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವರು, ಕಳಸಾ ಬಂಡೂರಿ ನಾಲಾ ಯೋಜನೆಯ ಪರಿಹಾರದ ಬಗ್ಗೆ ಹೇಳುವರು ಎಂಬ ನಿರೀಕ್ಷೆ ಇತ್ತು. ಆದರೆ ಅದಾವುದೂ ನಡೆಯಲಿಲ್ಲ ಎಂದು ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಅವರು ಮಾತನಾಡುವ ಸಂದರ್ಭದಲ್ಲಿ ಇತ್ತೀಚಿಗೆ ಭಾರೀ ಚರ್ಚೆಗೆ ಕಾರಣವಾಗಿರುವ ಸಿಎಎ ಮತ್ತು ಎನ್.ಆರ್.ಸಿ ಕುರಿತಾಗಿ ಅವರು ಮಾತನಾಡುತ್ತಾ ಈ ಎರಡು ವಿಷಯಗಳು ಮಾತ್ರವಲ್ಲದೇ ದೇಶಕ್ಕೆ ಸಂಬಂಧಿಸಿದ ಯಾವುದೇ ವಿಷಯಕ್ಕೆ ಆದರೂ ನಾನು ಚರ್ಚೆಗೆ ಸಿದ್ಧವಾಗಿರುವುದಾಗಿ ಅವರು ಹೇಳಿದ್ದಾರೆ.‌ ಈ ಚರ್ಚೆಗೆ ಅವರು ಮೋದಿ ಮತ್ತು ಅಮಿತ್ ಶಾ ಅವರಿಗೆ ಮುಕ್ತ ಆಹ್ವಾನವನ್ನು ನೀಡುತ್ತಿರುವುದಾಗಿ ಕೂಡ ಹೇಳಿದ್ದಾರೆ. ಅಲ್ಲದೆ ಅವರು ಈ ವಿಷಯವಾಗಿ ಅವರು ಇನ್ನಷ್ಟು ವಿಷಯಗಳನ್ನು ಕೂಡಾ ಹೇಳಿದ್ದಾರೆ.

ಅವರು ಚರ್ಚೆಯು ಬಹಿರಂಗವಾಗಿ ನಡೆಯಬೇಕು ಹೇಳಿದ್ದು, ಚರ್ಚೆಯು ವಿಧಾನ ಸೌಧದ ಮೆಟ್ಟಿಲುಗಳ ಮೇಲೆಯೇ ನಡೆಯಲಿ ಎಂದಿರುವ ಅವರು ಬಹಿರಂಹ ಚರ್ಚೆಗೆ ತಾನು ಸದಾ‌ ಸಿದ್ಧ ಎಂದು ಹೇಳಿದ್ದಾರೆ. ಚರ್ಚೆಗೆ ಅಮಿತ್ ಶಾ, ಮೋದಿ ಅಥವಾ ಪ್ರಹ್ಲಾದ್ ಜೋಷಿ ಅವರನ್ನು ಚರ್ಚೆಗೆ ಆಹ್ವಾನ ನೀಡಿರುವ ಅವರು ಅಮಿತ್ ಶಾ ಅವರಿಗೆ ತಾಕತ್ ಇದೆಯಾ ಎಂದು ಸವಾಲೊಂದನ್ನು ಕೂಡಾ ಎಸೆದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here