ದೆಹಲಿ ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ಗೃಹ ಸಚಿವ ಅಮಿತ್ ಶಾ ಮೌನ ಮುರಿದಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕರು ನೀಡಿದ ಗೋಲಿ ಮಾರೋ…., ಭಾರತ-ಪಾಕ್ ಪಂದ್ಯಗಳಂತಹ ದ್ವೇಷಪೂರಿತ ಘೋಷಣೆ, ಹೇಳಿಕೆಗಳೇ ಪ್ರಮುಖ ಕಾರಣವಾದವು ಎಂದು ವಿಶ್ಲೇಷಿಸಿದ್ದಾರೆ.
ಟೈಮ್ಸ್ ನೌ ಸಮ್ಮಿಟ್‌ನಲ್ಲಿ ಮಾತನಾಡಿರುವ ಅವರು, ಈ ರೀತಿಯ ಘೋಷಣೆಗಳು, ಹೇಳಿಕೆಗಳಿಂದ ದೆಹಲಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿರಬಹುದು ಶಾ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಚುನಾವಣಾ ಫಲಿತಾಂಶ ಸಿಎಎ ಹಾಗೂ ಎನ್‌ಆರ್‌ಸಿ ಕುರಿತ ಜನಾದೇಶವಲ್ಲ. ತಮ್ಮ ಜೊತೆ ಸಿಎಎ ಕುರಿತು ಚರ್ಚೆ ನಡೆಸಬೇಕೆಂದಿರುವವರು ತಮ್ಮ ಕಚೇರಿಯನ್ನು ಸಂಪರ್ಕಿಸಿ ಸಮಯವನ್ನು ಕೇಳಬಹುದೆಂದು ಅಮಿತ್ ಶಾ ಮುಕ್ತ ಆಹ್ವಾನ ಕೊಟ್ಟಿದ್ದಾರೆ. ಬಿಜೆಪಿ ಒಂದು ಸಿದ್ದಾಂತವನ್ನು ಹೊಂದಿರುವ ಪಕ್ಷವಾಗಿದ್ದು, ಸೋಲು-ಗೆಲುವು ಏನೇ ಬಂದರೂ ಪಕ್ಷದ ಸಿದ್ದಾಂತ ಬದಲಾಗುವುದಿಲ್ಲ. ದೇಶದಲ್ಲಿ ಎದುರಾಗುವ ಚುನಾವಣೆಗಳು ಪಕ್ಷಗಳ ಸಿದ್ದಾಂತವನ್ನು ಪ್ರಚುರಪಡಿಸುವ ವೇದಿಕೆಗಳು ಮಾತ್ರ.

ನಾನೊಬ್ಬ ಬಿಜೆಪಿ ಮುಖಂಡನಾಗಿ ಪಕ್ಷದ ಸಿದ್ದಾಂತವನ್ನು ಸಾರಿ ಹೇಳುವ ಕೆಲಸವನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂದೂ ಶಾ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೋಲು ಇದೇ ಮೊದಲೇನಲ್ಲ. ಈ ಹಿಂದೆ ಕೂಡಾ ಸಾಕಷ್ಟು ಬಾರಿ ಬಿಜೆಪಿ ಇಲ್ಲಿ ಸೋಲನ್ನು ಕಂಡಿದೆ. ಆಗಲೂ ಕೂಡಾ ಕರ್ತವ್ಯ ನಿರ್ವಹಿಸುವ ವಿಚಾರದಲ್ಲಿ ನಮ್ಮ ಉತ್ಸಾಹ ಯಾವುದೇ ರೀತಿ ಕುಗ್ಗುವುದಿಲ್ಲ ಎಂದು ಸಚಿವ ಅಮಿತ್ ಶಾ ತಿಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here