ಲಡಾಖ್ ನ ವಿಷಯವಾಗಿ ಕಳೆದ ಕೆಲವು ದಿನಗಳಿಂದಲೂ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾದ ಆರೋಪಗಳನ್ನು ಮಾಡುತ್ತಾ ತನ್ನ ಆಕ್ರೋಶವನ್ನು ಹೊರಹಾಕುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಮೇಲೆ ಹರಿಹಾಯ್ದಿದ್ದಾರೆ ಕೇಂದ್ರ ಗೃಹ ಖಾತೆ ಸಚಿವರಾದ ಅಮಿತ್ ಶಾ ಅವರು. ರಾಹುಲ್ ಗಾಂಧಿಯವರು ಮಾಡುತ್ತಿರುವ ರಾಜಕೀಯ ತಪ್ಪೆಂದು ಹೇಳಿರುವ ಅಮಿತ್ ಶಾ ಅವರು ಲಡಾಖ್ ವಿಚಾರದಲ್ಲಿ ನಾವು ಚರ್ಚೆಗೆ ಸಿದ್ಧರಿದ್ದೇವೆ,ನಾವು ಹೆದರುವುದಿಲ್ಲ, ಕಲಾಪಕ್ಕೆ ಬನ್ನಿ ಈ ವಿಚಾರದ ಬಗ್ಗೆ ಚರ್ಚೆ ಮಾಡೋಣ ಎಂದು ರಾಹುಲ್ ಗಾಂಧಿಯವರಿಗೆ ಆಹ್ವಾನವನ್ನು ನೀಡಿದ್ದಾರೆ.

ಅಮಿತ್ ಶಾ ಅವರು ಮಾತ‌ನಾಡುತ್ತಾ 1962ರಿಂದ ಗಡಿಯಲ್ಲಿ ಏನೇನು ನಡೆದಿದೆ ಎನ್ನುವ ವಿಷಯವಾಗಿ ನಾವು ಚರ್ಚೆ ಮಾಡೋಣ. ಅಂದಿನಿಂದಲೂ ಅಲ್ಲಿ ಏನೇನು ನಡೆದಿದೆ ಎಂಬುದಕ್ಕೆ ದಾಖಲೆ ಸಮೇತ ರಾಹುಲ್ ಗಾಂಧಿಯವರು ಚರ್ಚೆಗೆ ಬರಲಿ ಎಂದು ಸವಾಲನ್ನು ಕೂಡಾ ಹಾಕಿದ್ದಾರೆ. ಗಡಿಯಲ್ಲಿ ಯೋಧರು ಚೀನಾದ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಅವರು ರಾಹುಲ್ ಗಾಂಧಿಯವರು ಈಗ ನೀಡುತ್ತ ಇರುವಂತಹ ಹೇಳಿಕೆಗಳು ಸಮಂಜಸವಲ್ಲ ಎಂದಿದ್ದಾರೆ ಅಮಿತ್ ಶಾ ಅವರು.

ರಾಹುಲ್ ಗಾಂಧಿಯವರು ನೀಡುವ ಹೇಳಿಕೆಗಳು ಚೀನಾ ಮತ್ತು ಪಾಕಿಸ್ತಾನವನ್ನು ಸಂತೋಷ ಪಡಿಸುತ್ತಿದ್ದು, ಇದು ಅವರಿಗೆ ಅನುಕೂಲವಾಗಿದೆ. ಅಲ್ಲದೇ ಚೀನಾ ಮತ್ತು ಪಾಕ್ ನಲ್ಲಿ ಅಲ್ಲಿನ ನಾಗರಿಕರು ಹ್ಯಾಷ್ ಟ್ಯಾಗ್ ಮಾಡಿ ಈ ಸುದ್ದಿಗಳ ಆನಂದವನ್ನು ಪಡುತ್ತಿದ್ದಾರೆ. ಈ ರೀತಿ ಕಾಂಗ್ರೆಸ್ ಹೇಳಿಕೆಗಳನ್ನು ನೀಡುವ ಮೂಲಕ ದೇಶ ವಿರುದ್ಧ ಪ್ರಚಾರ ಮಾಡುತ್ತಿದ್ದು, ರಾಷ್ಟ್ರೀಯ ಪಕ್ಷವೊಂದರ ಮಾಜಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರು ಇಂತಹ ಸಣ್ಣತನದ ರಾಜಕೀಯ ಮಾಡುವುದು ಸರಿಯಲ್ಲ ಎಂದು ಅಮಿತ್ ಶಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here