ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕಳೆದ ಐದು ದಶಕಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ಅಸಾಧಾರಣ ಸಾಧನೆ ಮಾಡಿ ವರ್ಷದ ವಿಶ್ವದಾದ್ಯಂತ ಹಲವಾರು ಅಭಿಮಾನಿಗಳನ್ನು ಹೊಂದಿರುವ ಅಮಿತಾಭ್ ಬಚ್ಚನ್ ಸಮಾಜ ಸೇವೆಯಲ್ಲೂ ಸದಾ ಮುಂದು. ಅದಕ್ಕೆ ಇತ್ತೀಚಿನ ಉದಾಹರಣೆ ಅಂದ್ರೆ ಬಿಹಾರ ರಾಜ್ಯದ ರೈತರ ಪಾಲಿಗೆ ಅಮಿತಾಭ್ ಬಚ್ಚನ್ ನಿಜಕ್ಕೂ ದೇವರೇ ಆಗಿದ್ದಾರೆ ಎನ್ನಬಹುದು. ಅಮಿತಾಭ್ ಬಚ್ಚನ್ ಅಂತಹ ಕೆಲಸ ಏನ್ ಮಾಡಿದ್ರಪ್ಪಾ ಅಂತ ನೀವು ಕೇಳಬಹುದು. ಹೌದು ಅಮಿತಾಭ್ ಬಚ್ಚನ್ ಅವರು

ಈಗ ಬಿಹಾರದಲ್ಲಿನ ಸುಮಾರು 2100 ರೈತರ ಸಾಲವನ್ನು ತಿರಿಸುವುದರ ಮೂಲಕ ತಮ್ಮ ಸಾಮಾಜಿಕ ಕಳಕಳಿ ಮುಂದುವರಿಸಿದ್ದಾರೆ . ವಿಶೇಷ ಎಂದರೆ ಅಮಿತಾಭ್ ಬಚ್ಚನ್ ಈ ವಿಷಯವನ್ನು ಈಗ ತಮ್ಮ ಬ್ಲಾಗ್ ವೊಂದರಲ್ಲಿ ಬರೆದುಕೊಂಡಿದ್ದಾರೆ.” ಈಗ ರೈತರಿಗೆ ನೀಡಿದ ಭರವಸೆಯನ್ನು ಈಡೇರಿಸಲಾಗಿದೆ. ಸಾಲವನ್ನು ಹೊಂದಿರುವ 2100 ರೈತರ ಸಾಲವನ್ನು ಮರುಪಾವತಿಸಲಾಗಿದೆ. ಕೆಲವರನ್ನು ಜನಕ್ ಗೆ ವೈಯಕ್ತಿಕವಾಗಿ ಕರೆದು ಶ್ವೇತಾ ಹಾಗೂ ಅಭಿಷೇಕ್

ಅವರ ಮೂಲಕ ಹಂಚಲಾಗಿದೆ ” ಎಂದು ಅಮಿತಾಬ್ ಬಚ್ಚನ್ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಅಮಿತಾಬ್ ಬಚ್ಚನ್ ರೈತರಿಗೆ ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ, ಕಳೆದ ವರ್ಷ ಸಹ ಉತ್ತರ ಪ್ರದೇಶದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ  ರೈತರ ಸಾಲವನ್ನು ತೀರಿಸಿದ್ದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here