ಅಂಗವಾಡಿಗಳಿಗೆ ಕಳಪೆ ಮೊಟ್ಟೆ ವಿತರಣೆ: ಸರ್ಕಾರದ ವಿರುದ್ಧ ಆಕ್ರೋಶ

ಬೆಂಗಳೂರು: ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ವಿತರಿಸಲು ರಾಜ್ಯದ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಕಳಪೆ ಮಟ್ಟದೆಂದು ಬೆಳಕಿಗೆ ಬಂದಿದೆ. ಇದು ಗರ್ಭಿಣಿ ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ವಿವಿಧ ಯೋಜನೆಳಂತೆ ಮೊಟ್ಟೆ ವಿತರಣೆಯಲ್ಲಿಯೂ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಆಕ್ರೋಶವ್ಯಕ್ತವಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಹಾಳಾಗಿದ್ದು, ಬೇಯಿಸಿದ ನಂತರ ಸಿಪ್ಪೆ ತೆಗೆದು ನೋಡಿದರೆ, ಮೊಟ್ಟೆ ಕಪ್ಪಾಗಿರುವುದು ಕಂಡು ಬಂದಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದರೆ. ವಿವಿಧ ಯೋಜನೆಳಂತೆ ಮೊಟ್ಟೆ ವಿತರಣೆಯಲ್ಲಿಯೂ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈ ಕುರಿತು ಬಿಜೆಪಿ ಪಕ್ಷ ಕಟುವಾಗಿ ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ”ಕಳಪೆ ಆಹಾರ ಕೊಡುವುದೂ ಒಂದೇ, ಕೈಯಾರೆ ವಿಷ ಉಣಿಸುವುದೂ ಒಂದೇ. ಅದರಲ್ಲೂ ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಟಿಕತೆ ಹೆಸರಲ್ಲಿ ವಿಷ ನೀಡುತ್ತಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವ ಕೆಲಸ ಎಂದು ಸರ್ಕಾರವನ್ನು ಕಟುವಾಗಿ ಟೀಕಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಎಟಿಎಂ ಸರ್ಕಾರಕ್ಕೆ ವಾರದ ಕಲೆಕ್ಷನ್ ಸಂದಾಯವಾದರೆ ಆಯಿತು. ಬೇರೆಲ್ಲದರ ಬಗ್ಗೆ ಚಿಂತೆಯೇ ಇಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ. ಮಕ್ಕಳು ಮತ್ತು ಅಂಗನವಾಡಿಗಳಿಗೆ ಪೂರೈಸುತ್ತಿರುವ ಮೊಟ್ಟೆ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ.

ಹಾಸನ, ಕೊಡಗು, ಹಾವೇರಿ ಜಿಲ್ಲೆ ಸೇರಿ ಕೆಲವು ಜಿಲ್ಲೆಗಳ ಅಂಗನವಾಡಿಗಳಿಗೆ ಹಾಳಾದ ಮೊಟ್ಟೆಗಳನ್ನು ವಿತರಿಸಲಾಗಿದೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಎರಡು ಪ್ರಕರಣ ಪತ್ತೆಯಾಗಿದೆ. ಇನ್ನೂ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವತ್ತೂರು ಗ್ರಾಮದ ಅಂಗನವಾಡಿಗೂ ಕೊಳೆತ ಮೊಟ್ಟೆ ಪೂರೈಕೆ ಆಗಿದೆ. ಹೀಗಾಗಿ ಮೊಟ್ಟೆ ಪಡೆಯಲು ಹಿಂದೇಟು ಹಾಕುವಂತಾಗಿದೆ. ಇಂತಹ ಮೊಟ್ಟೆಯನ್ನು ಮಕ್ಕಳು, ಗರ್ಭಿಣಿಯರು ತಿಂದರೆ ಅವರ ಅನಾರೋಗ್ಯಕ್ಕೆ ಯಾರ ಹೊಣೆ ಎಂಬ ಪ್ರಶ್ನೆ ಎದುರಾಗಿದೆ.

Comments (0)
Add Comment