ಅಂತರಿಕ್ಷಯಾತ್ರಿಗಳು ಧರಿಸುವ ಬಟ್ಟೆ ಬಿಳಿ, ಕೇಸರಿ ಬಣ್ಣದ ಹಿಂದಿದೆ ಒಂದು ಕಾರಣ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದ ಚಂದ್ರಯಾನ 3 ಯಶಸ್ವಿಯಾಗಿದ್ದು, ಬ್ಯಾಹ್ಯಾಕಾಶ ಲೋಕದಲ್ಲಿ ಭಾರತ ಹೊಸ ಮೈಲಿಗಲ್ಲನ್ನೇ ಸೃಷ್ಟಿಸಿದೆ.

ಇನ್ನೂ ಬಾಹ್ಯಾಕಾಶದ ಬಗ್ಗೆ ಸಾಕಷ್ಟು ಆಸಕ್ತಿದಾಯಕ ವಿಚಾರಗಳಿವೆ. ಸಿನಿಮಾ ಹಾಗೂ ಟಿವಿಗಳಲ್ಲಿ ನೋಡುವ ಜನಸಾಮಾನ್ಯರಲ್ಲಿ ಅಂತರಿಕ್ಷಯಾತ್ರಿಗಳು ಬಿಳಿ ಅಥವಾ ಆರೆಂಜ್ ಬಟ್ಟೆಯನ್ನು ಧರಿಸಿರುತ್ತಾರೆ. ಈ ಎರಡು ಬಣ್ಣಗಳನ್ನೇ ಯಾಕೆ ಧರಿಸುತ್ತಾರೆಂಬುಂದು ಕುತೂಹಲಕಾರಿ ವಿಷಯ.

ಅಂತರಿಕ್ಷಾ ಯಾತ್ರಿಗಳೆಂದರೆ ಯಾರು?

ಬಾಹ್ಯಾಕಾಶ ಹಾರಾಟ ಯೋಜನೆಗೆ ಗಗನನೌಕೆಯನ್ನು ನಿಯಂತ್ರಿಸಲು, ಚಾಲನೆ ಮಾಡಲು, ಅಥವಾ ಚಾಲಕ ಸದಸ್ಯನಾಗಿ ಸೇವೆ ಸಲ್ಲಿಸಲು ತರಬೇತಿ ಹೊಂದಿದ ಮಾನವ. ಸಾಮಾನ್ಯವಾಗಿ ವೃತ್ತಿಪರ ಬಾಹ್ಯಾಕಾಶ ಯಾತ್ರಿಕರನ್ನು ಅಂತರಿಕ್ಷಾಯಾತ್ರಿಗಳು ಅಥವಾ ಗಗನಯಾತ್ರಿಗಳೆಂದು ಕರೆಯುತ್ತಾರೆ.

ಇವರು ಧರಿಸುವ ಬಟ್ಟೆಗಳ ಹಿಂದೆ ವೈಜ್ಞಾನಿಕ ಕಾರಣಗಳಿದೆ. ಬಾಹ್ಯಾಕಾಶಕ್ಕೆ ಹೋಗಿ ಬಂದಿರುವ ನಾಸಾ ವಿಜ್ಞಾನಿಗಳು ಈ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ಬಾಹ್ಯಾಕಾಶ ಯಾತ್ರಿಗಳು ಯಾಕೆ ಬಿಳಿ ಹಾಗೂ ಆರೆಂಜ್ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

  1. ಬಿಳಿ ಬಣ್ಣದ ಹಿಂದಿರುವ ಕಾರಣ: ಅಂತರಿಕ್ಷದಲ್ಲಿ ಇರುವಾಗ ಧರಿಸುತ್ತಾರೆ. ಯಾಕೆಂದರೆ ಸೋಲಾರ್ ರೇಡಿಯೇಶನ್ ಸೋಲಾರ್‌ ಅನ್ನು ಅದು ಕಡಿಮೆ ಮಾಡುವುದಕ್ಕಾಗಿ ಬಳಸಲಾಗುತ್ತದೆ.
  2. ಆರೆಂಜ್ ಬಣ್ಣದ ಹಿಂದಿನ ಕಾರಣ:

ಟೇಕ್ ಆಫ್ ಆಗುವಾಗ ಏನಾದರೂ ಅವಘಡ ನಡೆದು ನೀರಿನಲ್ಲಿ ಬಿದ್ದಾಗ ಆ ಸಂದರ್ಭದಲ್ಲಿ ಅವರನ್ನು ಹುಡುಕಲು ಆರೆಂಜ್ ಬಣ್ಣದ ಬಟ್ಟೆ ಸಹಾಯ ಮಾಡುತ್ತದೆ ಎನ್ನುವ ಕಾರಣಕ್ಕಾಗಿ ಆರೆಂಜ್ ಬಣ್ಣದ ಯೂನಿಫಾರ್ಮ್‌ ಅನ್ನು ಬಳಸುತ್ತಾರೆ.

Comments (0)
Add Comment