ಅಗಸ್ಟ್‌ 2ಕ್ಕೆ ರಾಜ್ಯದ ನಾಯಕರು ದೆಹಲಿಗೆ ಬರುವಂತೆ ಕಾಂಗ್ರೆಸ್​ ಹೈಕಮಾಂಡ್ ಸೂಚನೆ

ದೆಹಲಿ: ರಾಜ್ಯ ಕಾಂಗ್ರೆಸ್​​ ಶಾಸಕರ ಪತ್ರ ವ್ಯವಹಾರ ಸುದ್ದಿ ದೆಹಲಿ ಕಾಂಗ್ರೆಸ್​​ ನಾಯಕಗೆ ತಲುಪಿದೆ. , ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಶಾಸಕರು ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಇದೀಗ ಕೆಲವು ಸಚಿವರ ವಿರುದ್ಧ ಶಾಸಕರ ಆರೋಪಕ್ಕೆ ಸಂಬಂಧಪಟ್ಟಂತೆ ಕಾಂಗ್ರೇಸ್‌ ಹೈಕಂಡ್‌ ಎಂಟ್ರಿ ಕೊಟ್ಟಂತಿದೆ. ಆಗಸ್ಟ 2ಕ್ಕೆ ಸಚಿವರು ಮತ್ತು ಪ್ರಮುಖ ನಾಯಕರು ದೆಹಲಿಗೆ ಬರುವಂತೆ ಕಾಂಗ್ರೇಸ್‌ ಹೈಕಂಡ್‌ ಸೂಚನೆ ನೀಡಿದೆ.

ಸಚಿವರ ವಿರುದ್ಧ ಸಿಎಂ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿರುವ ಕೆಲ ಶಾಸಕರು, ಸಚಿವರು ಹಾಗೂ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ ಬಿ.ಕೆ.ಹರಿಪ್ರಸಾದ್, ಬಿ.ಎಲ್.ಶಂಕರ್ ಸೇರಿದಂತೆ ಕೆಲವು ನಾಯಕರಿಗೆ ಅವರಿಗೆ ದೆಹಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧಶಾಸಕ ಹರಿಪ್ರಸಾದ್ ’ನನಗೆ ಸಿಎಂ ಮಾಡಲು ಗೊತ್ತು, ಸ್ಥಾನದಿಂದ ಇಳಿಸಲು ಗೊತ್ತು ಎಂಬ ಹೇಳಿಕೆಯ ಬಗ್ಗೆಯು ಹೈಕಮಾಂಡ್ ಈ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಸರ್ಕಾರ ಮತ್ತು ಪಕ್ಷದ ನಾಯಕರ ನಡುವೆ ಕೊಂಡಿಯಾಗಿ ಕೆಲಸ ಮಾಡಲು ಗೃಹ ಸಚಿವ ಡಾ ಜಿ ಪರಮೇಶ್ವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಬಹುದು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಕಾಂಗ್ರೆಸ್​ ನಾಯಕ ರಾಹುಲ್​​ ಗಾಂಧಿ ಕೂಡ ಭಾಗವಹಿಸುವ ನಿರೀಕ್ಷೆ ಇದೆ. ಇನ್ನು ಸಭೆಯಲ್ಲಿ ಮಂಡಳಿ ಮತ್ತು ನಿಗಮಗಳ ಮುಖ್ಯಸ್ಥರನ್ನು ನೇಮಕಾ ಮಾಡುವ ಕುರಿತು, 2024ರ ಲೋಕಸಭೆ ಚುನಾವಣೆ ಕಾರ್ಯತಂತ್ರದ ಬಗ್ಗೆಯು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Comments (0)
Add Comment