ಅಥ್ಲಿಟ್ ಮೇಲೆ ಹಲ್ಲೆಗೆ ಯತ್ನಿಸಿದ ಕೋಚ್ ಪತ್ನಿ; ವೀಡಿಯೋ ವೈರಲ್

ಬೆಂಗಳೂರು: ಖಾಸಗಿ ಕಾರ್ಯಕ್ರಮವೊಂದರ ವೀಡಿಯೋ ವಾಟ್ಸಪ್‌ನಲ್ಲಿ ಹಂಚಿಕೊಂಡ ಕುರಿತಾಗಿ ಕೋಚ್ ಪತ್ನಿ ಮತ್ತು ಅಥ್ಲಿಟ್ ಮಧ್ಯೆ ವಾಗ್ವಾದ ನಡೆದು ಕೋಚ್ ಪತ್ನಿ ಅಥ್ಲಿಟ್ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರು ಕಂಠೀರವ ಮೈದಾನದಲ್ಲಿ ನಡೆದಿದೆ. ಹಲ್ಲೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

ಬಿಂದುರಾಣಿ ಎಂಬ ಅಥ್ಲಿಟ್ ಬೆಳಗ್ಗೆ ಪ್ರಾಕ್ಟಿಸ್‌ಗೆಂದು ಹೋದ ವೇಳೆ ಕೋಚ್ ಪತ್ನಿ ಶ್ವೇತಾ ಆಕೆಯನ್ನು ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಿಂದುರಾಣಿ, ಖಾಸಗಿ ಕಾರ್ಯಕ್ರಮವೊಂದರ ವೀಡಿಯೋವೊಂದನ್ನು ಕೋಚ್‌ಗಳ ವಾಟ್ಸಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ದೆ. ಆ ವಿಡಿಯೋದಲ್ಲಿ ತಪ್ಪು ಮಾಹಿತಿ ನೀಡಿದ್ದೀಯಾ ಎಂದು ಕೋಚ್ ಯತೀಶ್ ಎಂಬವರ ಪತ್ನಿ ಹಲ್ಲೆಗೆ ಯತ್ನಿಸಿದ್ದಾರೆ ಎಂದರು. ತಪ್ಪು ಮಾಹಿತಿ ನೀಡಿದ್ದೀಯಾ ಎಂದು ಕೋಚ್ ಗ್ರೂಪ್‌ನಲ್ಲಿ ಪ್ರಶ್ನೆ ಮಾಡಿದ್ದರು. ಈ ಕುರಿತು ಗ್ರೂಪ್‌ನಲ್ಲಿ ಸ್ಪಷ್ಟನೆ ಕೊಡದೆ ನೇರವಾಗಿ ಕಾಲ್ ಮಾಡಿದೆ.

ಪುತ್ತೂರು: ಮಗನ ಮದರಂಗಿ ಶಾಸ್ತ್ರದಂದು ಕಾಣೆಯಾಗಿದ್ದ ತಂದೆ- ಮಂಗಳೂರಿನಲ್ಲಿ ಪತ್ತೆ

ಕೆಲವೇ ನಿಮಿಷದಲ್ಲಿ ಕಾಲ್ ಕಟ್ ಆಯಿತು. ನಾನು ಅಲ್ಲಿಗೆ ಸುಮ್ಮನಾದೆ. ಆ ಘಟನೆ ಆದ ಬಳಿಕ ಇಂದು ಬೆಳಗ್ಗೆ ಕೋಚ್ ಯತೀಶ್ ಅವರ ಪತ್ನಿ ಬಂದು ಗಲಾಟೆ ಮಾಡಿದ್ದಾರೆ. ನಾನು ವಿಷಯ ದೊಡ್ಡದು ಮಾಡುವುದು ಬೇಡವೆಂದು ಸುಮ್ಮನಾದೆ. ಘಟನೆಯ ಸಂಬಂಧ ಅಥ್ಲೆಟಿಕ್ ಅಸೋಸಿಯೇಷನ್‌ಗೆ ದೂರು ನೀಡುತ್ತೇನೆ ಎಂದಿದ್ದಾರೆ. ಹಲ್ಲೆ ಯತ್ನಿಸಿದ್ದಾರೆ ಎನ್ನಲಾದ ಶ್ವೇತಾ ಅವರು, ಖೇಲ್‌ರತ್ನ ಪ್ರಶಸ್ತಿ ಸಂಬಂಧ ಪೋಸ್ಟ್ ಮಾಡಿಕೊಂಡಿದ್ದಕ್ಕೆ ನನ್ನ ಗಂಡ ಯತೀಶ್ ಬಿಂದುಗೆ ಗ್ರೂಪ್‌ನಲ್ಲಿಯೇ ಪ್ರಶ್ನೆ ಮಾಡಿದ್ದರು. ಕೋಚ್‌ಗ್ರೂಪ್‌ನಲ್ಲಿ ಉತ್ತರ ಕೊಡಬೇಕಿದ್ದ ಬಿಂದುರಾಣಿ, ರಾತ್ರಿ 10 ಗಂಟೆಗೆ ಆಕೆಯ ಗಂಡನ ಕಡೆಯಿಂದ ನನ್ನ ಪತಿ ಯತೀಶ್‌ಗೆ ಕಾಲ್ ಮಾಡಿಸಿ ಬೆದರಿಕೆ ಹಾಕಿಸಿದ್ದಾಳೆ. ನನ್ನ ಪತಿ ಕಾಲ್ ಕಟ್ ಮಾಡಿದ ನಂತರ ಕಾಲು ಗಂಟೆಯಲ್ಲಿ ಮತ್ತೊಮ್ಮೆ ಕರೆ ಮಾಡಿದ್ದಾರೆ. ಈ ವೇಳೆ ನಾನು ಕಾಲ್ ರಿಸೀವ್ ಮಾಡಿ ಮಾತನಾಡುವಾಗ, ನನಗೆ ದೊಡ್ಡವರು ಗೊತ್ತು. ನಿಮ್ಮನ್ನು ಸ್ಟೇಡಿಯಂನಿಂದಲೇ ಹೊರಹಾಕಿಸುತ್ತೇನೆ ಎಂದು ಹೇಳಿದ್ದಾಳೆ. ಆ ಕಾರಣಕ್ಕಾಗಿ ಶನಿವಾರವೇ ಹೋಗಿದ್ದೆ. ಆದರೆ ಸಿಗಲಿಲ್ಲ. ಹಾಗಾಗಿ ಇವತ್ತು ಹೋಗಿ ಮಾತನಾಡಿದೆ ಎಂದರು.

Comments (0)
Add Comment