ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇಂದು ಕೊನೆಯ ದಿನ – 1 ಗಂಟೆಯಲ್ಲಿ 3.39 ಲಕ್ಷ ITR ಸಲ್ಲಿಕೆ

ನವದೆಹಲಿ: ಜುಲೈ 31 ರಂದು ಮಧ್ಯಾಹ್ನ 12 ಗಂಟೆಯವರೆಗೆ 11 ಲಕ್ಷಕ್ಕೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ (ITR) ಗಳನ್ನು ತೆರಿಗೆದಾರರು ಸಲ್ಲಿಸಿದ್ದಾರೆ. ಈ ಪೈಕಿ 3.39 ಲಕ್ಷ ತೆರಿಗೆ ರಿಟರ್ನ್ಸ್ ಅನ್ನು ಕಳೆದ 1 ಗಂಟೆಯಲ್ಲಿ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹಂಚಿಕೊಂಡ ಮಾಹಿತಿ ತಿಳಿಸಿದೆ. ಐಟಿಆರ್ ಸಲ್ಲಿಸುವ ಗಡುವು ಇಂದು (ಜುಲೈ 31) ಕೊನೆಗೊಳ್ಳಲಿದ್ದು, ಸರ್ಕಾರ ಅದನ್ನು ವಿಸ್ತರಿಸುವ ಸಾಧ್ಯತೆಯಿಲ್ಲ. ವ್ಯಕ್ತಿಗಳು ಮತ್ತು ಎಚ್‌ಯುಎಫ್‌ಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಅಂದರೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಭಾನುವಾರ ಒಂದೇ ದಿನ 2.7 ಮಿಲಿಯನ್ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ಭಾನುವಾರ ಸಂಜೆ 6:30ರ ವೇಳೆಗೆ 1.3 ಕೋಟಿಗೂ ಹೆಚ್ಚು ಲಾಗಿನ್‌ಗಳಿಗೆ ಸಾಕ್ಷಿಯಾಗಿದ್ದು, ಆದಾಯ ತೆರಿಗೆ ಇಲಾಖೆಯ ಪ್ರಕಾರ, ಭಾನುವಾರ ಸಂಜೆ 6.30 ರವರೆಗೆ ಸುಮಾರು 26.76 ಲಕ್ಷ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಜುಲೈ 30ರವರೆಗೆ 6 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ತೆರಿಗೆ ವೃತ್ತಿಪರರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳು ಗಡುವನ್ನು ವಿಸ್ತರಿಸುವ ಸಾಧ್ಯತೆಯಿಲ್ಲ ಎಂದು ಹೇಳಿದ್ದರಿಂದ ಭಾನುವಾರ ರಿಟರ್ನ್ಸ್ ಸಲ್ಲಿಕೆಗೆ ನೂಕುನುಗ್ಗಲು ಕಂಡುಬಂದಿದೆ. AY 2023-24 ಗಾಗಿ ಐಟಿಆರ್ ಅನ್ನು ಸಲ್ಲಿಸದ ಎಲ್ಲರಿಗೂ, ಕೊನೆಯ ಕ್ಷಣದ ಗೊಂದಲ ತಪ್ಪಿಸಿಕೊಳ್ಳಲು ತಮ್ಮ ಐಟಿಆರ್ ಅನ್ನು ಆದಷ್ಟು ಬೇಗ ಸಲ್ಲಿಸುವಂತೆ ತೆರಿಗೆ ಇಲಾಖೆ ಭಾನುವಾರ ಸಂಜೆ ಟ್ವೀಟ್‌ ಮೂಲಕ ಒತ್ತಾಯಿಸಿದೆ.

Comments (0)
Add Comment