ಆದಿವಾಸಿಯ ಪಾದಪೂಜೆ ಮಾಡಿದ ಮಧ್ಯಪ್ರದೇಶ ಸಿಎಂ- ಪೋಟೊ ವೈರಲ್

ಭೋಪಾಲ್: ಬುಡಕಟ್ಟು ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣದ ಬಗ್ಗೆ ತೀವ್ರವಾಗಿ ಖಂಡಿಸಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸಂತ್ರಸ್ತನ ಪಾದ ತೊಳೆದು ಗೌರವ ಸಲ್ಲಿಸಿದ್ದಾರೆ.

ಹಾಂಕ್ ಕಾಂಗ್ ಮೂಲದ ಗಾಯಕಿ ಕೊಕೊ ಲೀ ಅತ್ಮಹತ್ಯೆಗೆ ಶರಣು

ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಭೋಪಾಲ್‌ನ ತಮ್ಮ ನಿವಾಸಕ್ಕೆ ಸಂತ್ರಸ್ತನನ್ನು ಕರೆದು ಆತನ ಕಾಲು ತೊಳೆದು, ಸನ್ಮಾನಿಸಿ ವಿಶೇಷ ಗೌರವ ಸಲ್ಲಿಸಿದ್ದಾರೆ. ಘಟನೆಗೆ ಬೇಸರ ವ್ಯಕ್ತಪಡಿಸಿರುವ ಸಿಎಂ, ವೀಡಿಯೋ ನೋಡಿ ನನಗೆ ನೋವಾಯಿತು. ನಿಮ್ಮಲ್ಲಿ ನಾನು ಕ್ಷಮೆ ಕೇಳುತ್ತೇನೆ. ಜನರು ನನಗೆ ದೇವರಿದ್ದಂತೆ ಎಂದು ಸಂತ್ರಸ್ತ ದಶಮತ್‌ ರಾವತ್‌ ಬಳಿ ಕ್ಷಮೆಯಾಚಿಸಿದ್ದಾರೆ. ಪ್ರವೇಶ್‌ ಶುಕ್ಲಾ ಎಂಬಾತ ಬುಡಕಟ್ಟು ಸಮುದಾಯದ ರಾವತ್‌ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನ ಅಕ್ರಮ ಕಟ್ಟಡವನ್ನು ಮಧ್ಯಪ್ರದೇಶ ಸರ್ಕಾರ ಬುಲ್ಡೋಜರ್‌ ಮೂಲಕ ನೆಲಸಮಗೊಳಿಸುವ ಕ್ರಮಕೈಗೊಂಡಿತು.

Comments (0)
Add Comment