ಈರುಳ್ಳಿ ಕತ್ತರಿಸುವಾಗ ಕಣ್ಣೀರು ಯಾಕೆ ಬರುತ್ತದೆ ಗೊತ್ತಾ? – ಇಲ್ಲಿದೆ ಅಪರೂಪದ ಮಾಹಿತಿ..

ಆಹಾರ ಪ್ರಿಯರ ನೆಚ್ಚಿನ ತರಕಾರಿ ಈರುಳ್ಳಿ. ಈ ಒಂದು ತರಕಾರಿ ಎಲ್ಲಾ ಅಡುಗೆಗೆ ಅತ್ಯಗತ್ಯ ಎನಿಸಿಕೊಂಡಿದೆ. ರುಚಿಯ ಜೊತೆಗೆ ಪೋಷಕಾಂಶಗಳಿಂದ ಸಮೃದ್ದವಾಗಿರುವ ಈರುಳ್ಳಿಯನ್ನು (Onion) ಹಸಿಯಾಗಿಯೂ, ಬೇಯಿಸಿಯೂ ಅಡುಗೆಗಳಲ್ಲಿ ಬಳಸಲಾಗುತ್ತದೆ.

ಪ್ರತ್ಯೇಕತೆ

ಈರುಳ್ಳಿ ಹಚ್ಚುವಾಗ ಕಣ್ಣಿನಲ್ಲಿ ನೀರು (Tears) ಬರುವುದು ಇದನ್ನು ಇತರ ತರಕಾರಿಗಳಿಂದ ಭಿನ್ನವಾಗಿ ಇರುವಂತೆ ಮಾಡುವ ಅಂಶ. ಬೇರೆ ಯಾವ ತರಕಾರಿ ಕತ್ತರಿಸುವಾಗಲೂ ಈ ಅನುಭವವಾಗುವುದಿಲ್ಲ. ಅದಕ್ಕೆ ಕಾರಣವೇನು ಎನ್ನುವುದರ ವಿವರ ಇಲ್ಲಿದೆ.

ಕಣ್ಣೀರು ಏಕೆ ಬರುತ್ತದೆ?

ಈರುಳ್ಳಿಯನ್ನು ತುಂಡು ಮಾಡುವಾಗ ಅದರ ಸೆಲ್ ಗ್ಯಾಸೊಂದನ್ನು ಬಿಡುಗಡೆ ಮಾಡುತ್ತದೆ. ಪ್ರೊಪನೆಥಿಯೋಲ್ – ಎಸ್ – ಓಕ್ಸೈಡ್ (Propanethial-S-Oxide) ಹೆಸರಿನ ಈ ಗ್ಯಾಸ್ ನಮ್ಮ ಕಣ್ಣಿನ ಸಂಪರ್ಕಕ್ಕೆ ಬಂದು ರಾಸಾಯನಿಕ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ಸಲ್ಫೂರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಆಗ ಕಣ್ಣು ಉರಿಯಲು ಆರಂಭವಾಗುತ್ತದೆ ಮತ್ತು ಈ ಆ್ಯಸಿಡ್ ಅನ್ನು ಹೊರ ಹಾಕಲು ಕಣ್ಣು ಹೆಚ್ಚಿನ ನೀರನ್ನು ಬಿಡುಗಡೆ ಮಾಡುತ್ತದೆ. ಅದು ಕಣ್ಣೀರಿನ ರೂಪದಲ್ಲಿ ಹೊರ ಬರುತ್ತದೆ.

ನಿಯಂತ್ರಣ ಹೇಗೆ?

ಈರುಳ್ಳಿ ತುಂಡರಿಸುವಾಗ ಕಂಡು ಬರುವ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಿದೆ. ಒಂದು ಸಣ್ಣ ತುಂಡು ಈರುಳ್ಳಿಯನ್ನು ಆರಂಭದಲ್ಲಿ ಕಿವಿ ಮೇಲಿಟ್ಟು ಬಳಿಕ ಕತ್ತರಿಸಲು ಆರಂಭಿಸಬೇಕು ಎಂದು ಕೆಲವರು ಸಲಹೆ ನೀಡುತ್ತಾರೆ. ಚ್ಯೂಯಿಂಗ್ ಗಮ್ ಅಗೆಯುತ್ತಾ ಈರುಳ್ಳಿ ತುಂಡರಿಸಿದರೆ ಕಣ್ಣೀರು ಬರುವುದಿಲ್ಲ ಎಂದು ಇನ್ನು ಕೆಲವರು ಹೇಳುತ್ತಾರೆ.

 

 

 

Comments (0)
Add Comment