ಉಗ್ರರಿಗೆ ಮಾಹಿತಿ ನೀಡುತ್ತಿದ್ದ ವ್ಯಕ್ತಿಯಿಂದ ಪಿಎಸ್‍ಐ ಹತ್ಯೆ

ಗುವಾಹತಿ: ಮಣಿಪುರದಲ್ಲಿ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಒಬ್ಬರನ್ನು ಉಗ್ರರಿಗೆ ಮಾಹಿತಿ ನೀಡುತ್ತಿದ್ದ ವ್ಯಕ್ತಿಯೊಬ್ಬ ತಲೆಗೆ ಗುಂಡು ಹೊಡೆದು ಹತ್ಯೆ ಮಾಡಿರುವ ಘಟನೆ ಚುರಚಂದಪುರ ಜಿಲ್ಲೆಯಲ್ಲಿ ನಡೆದಿದೆ.

ಒಂಕೋಮಂಗ್ ಹಾಕಿಪ್ ಎಂಬ ಪಿಎಸ್‍ಐ ಮೇಲೆ ನಸುಕಿನ 2 ಗಂಟೆ ವೇಳೆಗೆ ದಾಳಿ ನಡೆಸಿದ ಶಂಕಿತ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದು, ಈ ದಾಳಿಯಲ್ಲಿ ಇತರ ಇಬ್ಬರು ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಆಗಸ್ಟ್ 30 ಮತ್ತು 31ರಂದು ಖೋಶಭಂಗ್ ಮತ್ತು ಖೋರೆಂಟಾಕ್ ಪ್ರದೇಶದಲ್ಲಿ ವ್ಯಾಪಕ ಗುಂಡಿನ ದಾಳಿ ಮತ್ತು ಶೆಲ್ಲಿಂಗ್ ದಾಳಿ ನಡೆದ ಹಿನ್ನೆಲೆಯಲ್ಲಿ ನಿಯೋಜಿಸಲ್ಪಟ್ಟ ಹೆಚ್ಚುವರಿ ಭದ್ರತಾ ಪಡೆಯಲ್ಲಿ 45 ವರ್ಷದ ಒಂಕೋಮಂಗ್ ಹಾಕಿಪ್ ಕೂಡಾ ಸೇರಿದ್ದರು.

Comments (0)
Add Comment