ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತ ಘೋಷಣೆ ಮಾಡಿದ್ದಾರೆ. 37 ವರ್ಷ ವಯಸ್ಸಿನ ಮನೋಜ್ ತಿವಾರಿ ಅವರು ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳವನ್ನು ಪ್ರತಿನಿಧಿಸಿದ್ದಾರೆ ಮತ್ತು ಐಪಿಎಲ್‌ನಲ್ಲಿ ಹಲವಾರು ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ. ಅವರು 2008 ಮತ್ತು 2015ರ ನಡುವೆ 12 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 287 ರನ್ ಗಳಿಸಿದ್ದಾರೆ. ಮನೋಜ್ ತಿವಾರಿ 50-ಓವರ್ ಮಾದರಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಭಾರತ ತಂಡಕ್ಕಾಗಿ ಮೂರು ಟಿ20 ಪಂದ್ಯಗಳನ್ನು ಸಹ ಆಡಿದ್ದು, ಅಲ್ಲಿ ಅವರು 15 ರನ್ ಗಳಿಸಿದರು. ಮನೋಜ್ ತಿವಾರಿ ಅವರು ಜುಲೈ 14, 2015ರಂದು ಜಿಂಬಾಬ್ವೆ ವಿರುದ್ಧ ಭಾರತ ತಂಡದ ಪರ ತಮ್ಮ ಕೊನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ್ದರು. ನಿವೃತ್ತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಮನೋಜ್ ತಿವಾರಿ, “ಕ್ರಿಕೆಟ್ ಆಟಕ್ಕೆ ವಿದಾಯ ತಿಳಿಸುತ್ತೇನೆ. ಈ ಆಟವು ನನಗೆ ಎಲ್ಲವನ್ನೂ ನೀಡಿದೆ, ನಾನು ಕನಸು ಕಾಣದ ಪ್ರತಿಯೊಂದು ವಿಷಯವನ್ನೂ ನಾನು ಅರ್ಥೈಸಿಕೊಂಡಿದ್ದೇನೆ. ನನ್ನ ಜೀವನವು ವಿವಿಧ ರೀತಿಯ ತೊಂದರೆಗಳಿಂದ ಸವಾಲು ಪಡೆದ ಸಮಯದಿಂದ ಪ್ರಾರಂಭಿಸಿತು ಕ್ರಿಕೆಟ್‌ಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇನೆ ಮತ್ತು ಯಾವಾಗಲೂ ನನ್ನ ಪರವಾಗಿ ಇರುವ ದೇವರಿಗೆ’ ಎಂದು ಹೇಳಿದ್ದಾರೆ.

Comments (0)
Add Comment