ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ.. ಮುಸ್ಲಿಂ ಮದುವೆ ಆಗಿದ್ದೇ ತಪ್ಪಾ? – ನಟಿ ಪ್ರಿಯಾಮಣಿ

ಬೆಂಗಳೂರು: ಇತ್ತೀಚೀನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದದಿಂದ ಸೃಷ್ಠಿಯಾದ ಟ್ರೋಲ್‌ ಹಲವರ ಜೀವನದಲ್ಲಿ ಕೆಟ್ಟ ರೀತಿಯಲ್ಲಿ ಪರಿಣಾಮಿಸುತ್ತಿದೆ. ಇದೀಗ ಹಲವು ದಿನಗಳಿಂದ ವೈಯಕ್ತಿಕ ವಿಚಾರವಾಗಿ ಟ್ರೋಲ್‌ ಗೆ ಒಳಗಾಗುತ್ತಿರುವ ನಟಿ ಪ್ರಿಯಾಮಣಿ ಟ್ರೋಲರ್ಸ್‌ ವಿರುದ್ಧ ಕಿಡಿಕಾರಿದ್ದಾರೆ. ʼಎನೋ ಒಂಥರಾʼ ಸಿನಿಮಾ ಮೂಲಕ ಸ್ಯಾಂಡಲ್ವುಡ್‌ ಗೆ ಪದಾರ್ಪಣೆ ಮಾಡಿದ ನಟಿ ಪ್ರಿಯಾಮಣಿ, 2017ರಲ್ಲಿ ಉದ್ಯಮಿ ಮುಸ್ತಾಫಾ ರಾಜಾ ಜೊತೆ ವಿವಾಹವಾದ ಇವರು, ಇದೀಗ ತಮ್ಮ ದಾಂಪತ್ಯ ಜೀವನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ,ಲವ್ ಜಿಹಾದ್ ಲ್ಲಿ ಎಲ್ಲರೂ ಭಾಗಿಯಾಗಲ್ಲ. ಎಲ್ಲರನ್ನು ಒಂದೇ ದೃಷ್ಠಿಯಿಂದ ನೋಡುವುದು ತಪ್ಪು ಎಂದಿದ್ದಾರೆ. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿಹಾದ್ ಅಂತೆಲ್ಲಾ ಅಂದರು. “ಭಾರತ ಜಾತ್ಯಾತೀತ ದೇಶ, ಅಂದ ಮೇಲೆ ಇಲ್ಲಿ ಜಾತಿ ಧರ್ಮ ನೋಡುವುದು ತಪ್ಪೆನಿಸುತ್ತದೆ. ಹಾಗೆಯೇ ಇಲ್ಲಿ ಅನೇಕರು ಭಾಯಿ ಭಾಯಿ ಎಂದು ಕರೆಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಅಣ್ಣ ತಮ್ಮ ಭಾವನೆ ತಮ್ಮ ಮನದಾಳ ಮೂಲಕ ಬರಬೇಕು. ಪ್ರೀತಿಸಿದವರನ್ನು ಮದುವೆ ಆದ್ರೆ ತಪ್ಪಾ? ಟ್ರೋಲ್ ಬಗ್ಗೆ ತಲೆಕೆಡೆಸಿಕೊಳ್ಳ ಬಾರದು. ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವು ಸುದ್ದಿಗಳ ಬಗ್ಗೆ ತಲೆಕೆಡೆಸಿಕೊಳ್ಳಬಾರದು ಎಂದರು.

Comments (0)
Add Comment