ಎಸ್‌ಎಸ್‌ಎಲ್‌ವಿ ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಇಸ್ರೋ ನಿರ್ಧಾರ

ನವದೆಹಲಿ: ಇಸ್ರೋ ಸ್ಮಾಲ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್ (ಎಸ್‌ಎಸ್‌ಎಲ್‌ ವಿ) ರಾಕೆಟ್‌ ನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ವಿ ಮೊದಲ ಉಡಾವಣೆ ತಾಂತ್ರಿಕ ದೋಷದಿಂದ ವಿಫಲವಾಗಿತ್ತು. ನಂತರ ಇಸ್ರೋ , ರಾಕೆಟ್‌ನ ಲೋಪದೋಷವನ್ನು ಪತ್ತೆ ಹಚ್ಚಿ ಸರಿಪಡಿಸಲಾಗಿತ್ತು. ಆದಾದ ಬಳಿಕ ಫೆಬ್ರವರಿಯಲ್ಲಿ ನಡೆದ ಉಡಾವಣೆಯಲ್ಲಿ ಇಸ್ರೋದ ಇಒಎಸ್‌-07 ಮತ್ತು ಅಮೆರಿಕ ಮೂಲಕ ಅಂಟಾರಿಸ್‌ ಮತ್ತು ಚೆನ್ನೈ ಮೂಲದ ಸ್ಪೇಸ್‌ ಕಿಡ್ಸ್‌ ಅಜಾದಿಸ್ಯಾಟ್‌-2 ಉಪಗ್ರಹಗಳನ್ನು ಈ ರಾಕೆಟ್‌ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಬರಲಿದೆ ಕೇಸರಿ ಬಣ್ಣದ ವಂದೇ ಭಾರತ್ ರೈಲು

ಎಸ್‌ಎಲ್‌ಎಲ್‌ವಿ ರಾಕೆಟ್‌ಗಳು 500 ಕೆ.ಜಿ. ತೂಕದ ಉಪಗ್ರಹಗಳನ್ನ ಕೆಳಹಂತದ ಕಕ್ಷೆಗೆ ತಲುಪಿಸುವ ಹಾಗೂ 10 ಕೆ.ಜಿ ನ್ಯಾನೋ ಮತ್ತು 100 ಕೆ.ಜಿ ತೂಕದ ಮೈಕ್ರೋ ಉಪಗ್ರಹಗಳನ್ನು ಮೇಲಿನ ಹಂತದ ಕಕ್ಷೆಗೆ ಉಡಾವಣೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.

Comments (0)
Add Comment