-ಏಲೇಶ್ವರ ಕೇತಯ್ಯಅವರ ವಚನ .!

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

 

ವಚನ: :

ಜಡೆಮುಡಿ ಬೋಳು ಹೇಗಾದಡಾಗಲಿ,

ನಡೆನುಡಿ ಸಿದ್ಧಾಂತವಾದಡೆ ಸಾಕು,

ಆತ ಪರಂಜ್ಯೋತಿ ಗುರುವಹ.

ಆ ಇರವ ನಿನ್ನ ನೀನರಿ,ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗಸಂಗ.

 

-ಕೋಲ ಶಾಂತಯ್ಯ ಬಸವೇಶ್ವರಂಗೆ ಸರ್ವಗುಣ ಶೀಲ,

ಚೆನ್ನಬಸವಣ್ಣಂಗೆ ದಿವ್ಯಜ್ಞಾನಗುಣ ಶೀಲ,

ಪ್ರಭುದೇವರಿಗೆ ಬಸವಣ್ಣ ಚೆನ್ನಬಸವಣ್ಣನ

ಉಭಯಗುಣ ಶೀಲ,

ಮಡಿವಾಳಯ್ಯಂಗೆ ವೀರಗುಣ ಶೀಲ,

ಅಜಗಣ್ಣಂಗೆ ಐಕ್ಯಗುಣ ಶೀಲ,

ಸಿದ್ಧರಾಮಯ್ಯಂಗೆ ಯೋಗಗುಣ ಶೀಲ,

ನಿಜಗುಣಂಗೆ ಆತ್ಮಗುಣ ಶೀಲ,

ಚಂದಯ್ಯಂಗೆ ವೈರಾಗ್ಯಗುಣ ಶೀಲ,

ಘಟ್ಟಿವಾಳಂಗೆ ತ್ರಿವಿಧಗುಣ ಶೀಲ,

ಮೋಳಿಗಯ್ಯಂಗೆ ಭೇದಗುಣ ಶೀಲ,

ಅಕ್ಕಗಳಿಗೆ ನಿರ್ವಾಣಗುಣ ಶೀಲ,

ಮಿಕ್ಕಾದ ಪ್ರಮಥರಿಗೆಲ್ಲಕ್ಕೂ ಸ್ವತಂತ್ರಗುಣ ಶೀಲ.ಎನಗೆ ಏಲೇಶ್ವರಲಿಂಗವು ಕೊಟ್ಟುದೊಂದೆ ವಿಶ್ವಾಸಗುಣ ಶೀಲ.

 

-ಏಲೇಶ್ವರ ಕೇತಯ್ಯ

-ಏಲೇಶ್ವರ ಕೇತಯ್ಯಅವರ ವಚನ .!
Comments (0)
Add Comment