ಏಷ್ಯನ್ ಗೇಮ್ಸ್: ಸೈಲಿಂಗ್‌ನಲ್ಲಿ ಭಾರತಕ್ಕೆ ಒಲಿದ ಪದಕ- ಬೆಳ್ಳಿ ಗೆದ್ದ ನೇಹಾ ಠಾಕೂರ್

ಹ್ಯಾಂಗ್ ಝೂ: 19ನೇ ಏಷ್ಯನ್ ಗೇಮ್ಸ್ ಕೂಟದಲ್ಲಿ ಮಂಗಳವಾರ ಸೈಲಿಂಗ್ ರೂಪದಲ್ಲಿ ಮೊದಲ ಪದಕ ಭಾರತಕ್ಕೆ ಒಲಿದಿದೆ.

ಬಾಲಕಿಯರ ಡಿಂಗಿ ಐಎಲ್‌ಸಿಎ4 ಸ್ಪರ್ಧೆಯಲ್ಲಿ ಭಾರತದ ನೇಹಾ ಠಾಕೂರ್ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದು ಸೈಲಿಂಗ್ ನಲ್ಲಿ ಭಾರತಕ್ಕೆ ಬಂದ ಮೊದಲ ಪದಕವಾಗಿದೆ. ಒಟ್ಟಾರೆ 19ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಬಾಲಕಿಯರ ಡಿಂಗಿ ILCA4 ಓಟದ ಒಂಬತ್ತರಲ್ಲಿ ಮೂರನೇ ಸ್ಥಾನ ಪಡೆದ ಠಾಕೂರ್, 10 ನೇ ಓಟದಲ್ಲಿ ಒಂದು ಸ್ಥಾನವನ್ನು ಸುಧಾರಿಸಿದರು. ಅರ್ಹತಾ ಹಂತದಲ್ಲಿ 24:48 ರ ಒಟ್ಟಾರೆ ಸಮಯದೊಂದಿಗೆ ಎರಡನೇ ಸ್ಥಾನವನ್ನು ಪಡೆಯುವ ಮೂಲಕ ಬೆಳ್ಳಿ ಪದಕವನ್ನು ತನ್ನಾದಾಗಿಸಿಕೊಂಡರು.

Comments (0)
Add Comment