ಏ.23ರಂದು ಅಬ್ಬಿನಹೊಳೆ ಶ್ರೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ

 

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಇದೇ ಏಪ್ರಿಲ್ 23ರಂದು ನಡೆಯಲಿದೆ.

ಶ್ರೀ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ವದ ಅಂಗವಾಗಿ ಈಗಾಗಲೇ ಏಪ್ರಿಲ್ 11 ರಿಂದ ಧ್ವಜಾರೋಹಣ ಹಾಗೂ ಶ್ರೀ ಸ್ವಾಮಿ ಗಂಗಾಪೂಜೆಯ ಧಾರ್ಮಿಕ ಕಾರ್ಯ ಪ್ರಾರಂಭವಾಗಿದ್ದು, ಏಪ್ರಿಲ್ 19ರಂದು ಅಂಕುರಾರ್ಪಣದ ಕಳಸ ಸ್ಥಾಪನೆ, ಹೋಮ ಧ್ವಜಾರೋಹಣ, ಅಗ್ನಿ, ಪ್ರತಿಷ್ಠೆ, ಮೂರ್ತಿ ಹೋಮಾದಿ ಕಾರ್ಯಕ್ರಮ, ಅಂದು ರಾತ್ರಿ ಹನ್ಮಂತ ಮಹೋತ್ಸವ ಜರುಗಲಿದೆ. ಏ.20ರಂದು ಧ್ವಜಾರೋಹಣ, ಮೂರ್ತಿ ಹೋಮಾದಿ ಕಾರ್ಯಕ್ರಮಗಳು, ಅಂದು ರಾತ್ರಿ ಸಿಂಹ ವಾಮನೋತ್ಸವ ಕಾರ್ಯಕ್ರಮ ಜರುಗಲಿದೆ.

ಏ.21 ರಂದು ರಾತ್ರಿ ಗರುಡೋತ್ಸವ, ಬೆಳಗಿನ ಜಾವ 4 ಗಂಟೆಯಿಂದ 6 ರವರೆಗೆ ವೃಷಭ ಲಗ್ನದಲ್ಲಿ ಕಲ್ಯಾಣೋತ್ಸವ, ಏ.22ರಂದು ಗಜೇಂದ್ರ ಮೋಕ್ಷ, ಏ.23ರಂದು ಮೂರ್ತಿ ಹೋಮಾದಿ ಕಾರ್ಯಗಳು ಹಾಗೂ ಮಧ್ಯಾಹ್ನ 12 ರಿಂದ 1.30 ರವರೆಗೆ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ. ಏ.24 ರಂದು ಮೂರ್ತಿ ಹೋಮಾದಿ ಕಾರ್ಯಗಳು, ಜಲ ಕ್ರೀಡೋತ್ಸವ, ಮೃಗ ಯಾತ್ರೋತ್ಸವ, ಏ.25 ರಂದು ಮೂರ್ತಿ ಹೋಮಾದಿ ಕಾರ್ಯ, ವಸಂತೋತ್ಸವ ಕಾರ್ಯ, ಧ್ವಜಾರೋಹಣ ಕಾರ್ಯ, ಕಂಕಣ ವಿಸರ್ಜನೆ ಹಾಗೂ ಪೂರ್ಣಾಹುತಿ 101 ಮಂಗಳಾರತಿ ಕಾರ್ಯ ನಡೆಯಲಿದೆ.

ಏ.26ರಂದು ಶುಕ್ರವಾರ ಕೊನೆಯ ದಿನದಂದು ಸಂಜೆ 6 ಗಂಟೆಗೆ ಅಬ್ಬಿನಹೊಳೆ ಶ್ರೀ ಕಣಿವೆಮಾರಮ್ಮ ದೇವಿಗೆ ಸುಮಂಗಲೆಯರಿಂದ ಅಕ್ಕಿ ತಬ್ಬಿಟ್ಟಿನ ಆರತಿ ಕಾರ್ಯ ನಡೆಯಲಿದೆ. ಜಾತ್ರಾ ಮಹೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

27ನೇ ವಾರ್ಷಿಕ ಮಹಾಸಭೆ: ಹಿರಿಯೂರು ತಾಲ್ಲೂಕು ಅಬ್ಬಿನಹೊಳೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಕ್ಷೇತ್ರಾಭಿವೃದ್ಧಿ ಸಮಿತಿ ಟ್ರಸ್ಟ್ ಸಂಘದ ಸರ್ವ ಸದಸ್ಯರ 27ನೇ ವಾರ್ಷಿಕ ಮಹಾಸಭೆಯು ಇದೇ ಏಪ್ರಿಲ್ 23ರಂದು ಬೆಳಿಗ್ಗೆ 11ಕ್ಕೆ ದೇವಸ್ಥಾನದ ಆವರಣದಲ್ಲಿ ಜರುಗಲಿದೆ.  ಸಂಘದ ಅಧ್ಯಕ್ಷ ಟಿ.ಪುಟ್ಟಾಚಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಏ.23ರಂದು ಅಬ್ಬಿನಹೊಳೆ ಶ್ರೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ
Comments (0)
Add Comment