ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8‌ ಮದುವೆಯಾಗಿ ನಗ-ನಗದು ದೋಚಿದ ಮಹಿಳೆಗೆ ಪೊಲೀಸರ ಶೋಧ

ತಮಿಳುನಾಡು: ಆನ್‌ಲೈನ್‌ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗಿ‌ ಕೆಲ ದಿನಗಳಲ್ಲೇ ನಗ-ನಗದಿನೊಂದಿಗೆ ಪರಾರಿಯಾಗುತ್ತಿದ್ದ ತಮಿಳುನಾಡಿನ ಕಿಲಾಡಿ ಮಹಿಳೆಯೊಬ್ಬಳಿಗೆ ಪೊಲೀಸರು ಬಲೆ ಬೀಸಿದ್ದಾರೆ‌.

ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಎಂಟು ಮದುವೆಯಾಗಿ ಬಳಿಕ ಭಾರೀ ಸಂಪತ್ತನ್ನೇ ದೋಚಿದ್ದಾಳೆ. ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲಂ ಪ್ರದೇಶದಲ್ಲಿ ಫೈನಾನ್ಸ್ ವ್ಯಾಪಾರಿಯಾಗಿರುವ ಮೂರ್ತಿ ಎಂಬ ವ್ಯಕ್ತಿ ರಶೀದಾ ಎಂಬ ಯುವತಿಯನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಂಡಿದ್ದರು. ಈ ಪರಿಚಯದ ಭಾಗವಾಗಿ, ಕೆಲ ಕಾಲ ರಿಲೇಷನ್‌ಷಿಪ್‌ನಲ್ಲೂ ಇದ್ದರು. ನಂತರ ಮೂರ್ತಿ ಮತ್ತು ರಶೀದಾ ಈ ವರ್ಷ ಮಾರ್ಚ್ 30 ರಂದು ವಿವಾಹವಾದರು. ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಕಲಹ ಉಂಟಾಗಿತ್ತು.

ಬೆಳ್ತಂಗಡಿ: ಸೈನೆಡ್ ಸೇವಿಸಿ ಯುವಕ ಆತ್ಮಹತ್ಯೆ

ಇದರಿಂದ ಜುಲೈ 4ರಂದು ರಶೀದಾ ಮನೆಯಲ್ಲಿದ್ದ 1.5 ಲಕ್ಷ ರೂಪಾಯಿ ಹಣ ಹಾಗೂ 5 ತೊಲೆ ಚಿನ್ನಾಭರಣ ತೆಗೆದುಕೊಂಡು ಓಡಿ ಹೋಗಿದ್ದಳು. ರಶೀದಾ ಇದುವರೆಗೆ 4 ರಾಜ್ಯಗಳಲ್ಲಿ 8 ಮದುವೆ ಮಾಡಿಕೊಂಡಿದ್ದಾರೆ. ಬಳಿಕ ಹಣ, ಬಂಗಾರದೊಂದಿಗೆ ಪರಾರಿಯಾಗಿದ್ದಾಳೆ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ತಮಿಳುನಾಡಿನಲ್ಲಿ ಮೂರ್ತಿ ಎಂಬ ಉದ್ಯಮಿಗೆ ವಂಚಿಸುವ ಮೊದಲು ಆಕೆ ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ 7 ಜನರನ್ನು ಮದುವೆಯಾಗಿದ್ದಳು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಶೀದಾಗಾಗಿ ತೀವ್ರ ಶೋಧ ನಡೆಸಿದ್ದಾರೆ.

Comments (0)
Add Comment