ಕವಾಡಿಗರ ಹಟ್ಟಿಯಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಗೆ ಚಾಲನೆ.!

 

ಚಿತ್ರದುರ್ಗ: ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಿತ್ರದುರ್ಗ ನಗರದ ಕವಾಡಿಗರ ಹಟ್ಟಿಯಲ್ಲಿ ಮಂಗಳವಾರ ನಗರ ಸಭೆ ಹಾಗೂ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಪೈಪ್ ಲೈನ್ ಹಾಗೂ ಶುದ್ಧ ಕುಡುಯುವ ನೀರು ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ನಗರ ಸಭೆಯ ರೂ 3.07 ಕೋಟಿ ಅನುದಾನದಲ್ಲಿ, ಇಡೀ ಕವಾಡಿಗರ ಹಟ್ಟಿಗೆ ಹೊಸದಾಗಿ ಪೈಪ್ ಲೈನ್ ಅಳವಡಿಕೆ, ಮನೆ ಮನೆಗೆ ಹೊಸ ನಳದ ಸಂಪರ್ಕ, 2.5 ಲಕ್ಷ ಲೀಟರ್ ಸಾಮರ್ಥ್ಯ ಓವರ್ ಹಡ್ ಟ್ಯಾಂಕ್ ಹಾಗೂ ಹಿರೇಕಂದವಾಡಿ ನೀರು ಶುದ್ದೀಕರಣ ಘಟಕದ ರಿಪೇರಿ ಮಾಡಲಾಗುವುದು.

ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ರೂ.16.50 ಲಕ್ಷ ಅನುದಾನದಲ್ಲಿ, ಕವಾಡಿಗರ ಹಟ್ಟಿಯಲ್ಲಿ ಹೊಸ ಬೋರವೆಲ್ ಕೊರೆಯುವುದರೊಂದಿಗೆ, 1 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಹಾಗೂ 5 ವರ್ಷ ಘಟಕದ ನಿರ್ವಹಣೆಯನ್ನು ಇಲಾಖೆ ಮಾಡಲಿದೆ.

ಇದೇ ಸಂದರ್ಭದಲ್ಲಿ ತಾತ್ಕಾಲಿಕ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುಧಾಕರ್ ಅವರು ಕಳೆದ 31 ದಿನಗಳಿಂದ ನಿರಂತರವಾಗಿ ಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಅಭಿನಂದಿಸಿ ಮಾಹಿತಿ ಪಡೆದಕೊಂಡರು.

ಈ ಸಂದರ್ಭದಲ್ಲಿ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಸೇರಿದಂತೆ ನಗರ ಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Comments (0)
Add Comment