ಕಾಂತಿಯುತ ತ್ವಚೆ ನಿಮ್ಮದಾಗಿಸಿಕೊಳ್ಳಲು ಟ್ರೈ ಮಾಡಿ ಸ್ಟ್ರಾಬೆರಿ ಹಣ್ಣಿನ ಫೇಸ್ ಪ್ಯಾಕ್

ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಯುವತಿಯರು ಈ ಸ್ಟ್ರಾಬೆರಿ ಹಣ್ಣಿನ ಉಪಯೋಗವನ್ನು ತಿಳಿದುಕೊಳ್ಳಲೇಬೇಕು. ಸ್ಟ್ರಾಬೆರಿ ಹಣ್ಣು ಯುವತಿಯರ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೇಗೆಂಬುದನ್ನು ಇಂದು ತಿಳಿದುಕೊಳ್ಳೋಣ. ಸ್ಟ್ರಾಬೆರಿಗಳನ್ನು ಮ್ಯಾಶ್ ಮಾಡಿ ಅದಕ್ಕೆ ನಿಂಬೆ ರಸವನ್ನು ಸೇರಿಸಿ ತ್ಚಚೆಗೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ಮುಖದಲ್ಲಿರುವ ರಂಧ್ರಗಳನ್ನು ಮುಚ್ಚುತ್ತದೆ ಜೊತೆಗೆ ಮುಖದ ಅಂದ ಹೆಚ್ಚುತ್ತದೆ.

ಸ್ಟ್ರಾಬೆರಿ ಹಣ್ಣುಗಳನ್ನು ಹಾಲಿನೊಂದಿಗೆ ಗ್ರೈನ್ ಮಾಡಿ. ನಂತರ ರೆಡಿಯಾದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಚೆನ್ನಾಗಿ ಮುಖ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದಲೂ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಸ್ಟ್ರಾಬೆರಿ ಹಣ್ಣಿನ ತಿರುಳು, ಕೆನೆ ಮತ್ತು ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ ಈಗ ತಯಾರಾದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸ್ಪಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ತ್ವಚೆ ಕಾಂತಿಯುತವಾಗಿ ಹೊಳೆಯುತ್ತದೆ. ಮೊಡವೆ ಸಮಸ್ಯೆ ಯೌವನದಲ್ಲಿ ಸಾಮಾನ್ಯ ಇದು ಎಲ್ಲರನ್ನೂ ಕಾಡಿರುತ್ತದೆ. ಇದರಿಂದ ಪಾರಾಗಲು ಇಲ್ಲಿದೆ ಸುಲಭ ಉಪಾಯ. ನೀವು ಸ್ಟ್ರಾಬೆರಿಯನ್ನು ತೆಗೆದುಕೊಂಡು ಅದಕ್ಕೆ ಕೆನೆಯನ್ನು ಮಿಶ್ರಣ ಮಾಡಿ ಮೊಡವೆ ಮೇಲೆಯೇ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಡಿ ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಕ್ರಮೇಣ ಹೀಗೆ ಮಾಡುವುದರಿಂದ ಮೊಡವೆಗಳು ಮಾಯವಾಗುತ್ತದೆ. ಸ್ಟ್ರಾಬೆರಿ ಹಣ್ಣಿನ ಸ್ಕ್ರಬ್ ತಯಾರಿಸಲು ಮೊದಲಿಗೆ ತೆಂಗಿನ ಎಣ್ಣೆ, ಸಕ್ಕರೆ, ವೆನಿಲ್ಲಾ ಸಾರ, ಮತ್ತು ಸ್ಟ್ರಾಬೆರಿ ಹಣ್ಣಿನ ತಿರುಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ಮುಖವನ್ನು ಸ್ವಚ್ಛ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ ಜೊತೆಗೆ ಮೃದುವಾಗುತ್ತದೆ.

Comments (0)
Add Comment