ಕಾರ್ಮಿಕ ಕಾರ್ಡ್‌ದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕಾರ್ಮಿಕ ಕಾರ್ಡ್‌ದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕಾರಣ ಅರ್ಹತೆ ಬಗ್ಗೆ ಅನುಮಾನ ಬಂದಿದ್ದು, ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಸಂತೋಷ್ ಲಾಡ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಅರ್ಹ ಫಲಾನುಭವಿಗಳ ಹೆಸರಿನಲ್ಲಿ 44 ಲಕ್ಷ ಮಂದಿ ಕಾರ್ಮಿಕ ಕಾರ್ಡ್‌ ಪಡೆದುಕೊಂಡಿದ್ದು, 12 ಲಕ್ಷ ಮಂದಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಸರ್ಕಾರವಿದ್ದಾಗ ಹದಿಮೂರುವರೆ ಲಕ್ಷ ಇದ್ದ ಕಾರ್ಮಿಕ ಕಾರ್ಡ್‌ಗಳ ಸಂಖ್ಯೆ ಬಿಜೆಪಿ ಸರ್ಕಾರದಲ್ಲಿ 44 ಲಕ್ಷಕ್ಕೆ ಏರಿದೆ. ಇದು ಅನುಮಾನಕ್ಕೆ ಕಾರಣವಾಗಿದ್ದು, ನಕಲಿ ಕಾರ್ಡ್‌ಗಳನ್ನು ಪತ್ತೆ ಮಾಡಲಾಗುವುದು ಎಂದಿದ್ದಾರೆ.

Comments (0)
Add Comment