ಕೃಷಿ ಸಿಂಚಾಯಿ ಯೋಜನೆ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

 

ಹೊಸಪೇಟೆ: 2023-24ನೇ ಸಾಲಿನಲ್ಲಿ ಹೂವಿನಹಡಗಲಿ ತೋಟಗಾರಿಕೆ ಇಲಾಖೆಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ನಿರ್ದೇಶಕ ಜಯಸಿಂಹ ಅವರು ತಿಳಿಸಿದ್ದಾರೆ.

ಕೃಷಿ ಸಿಂಚಾಯಿ ಯೋಜನೆಯಡಿ ಸ್ವಂತ ನೀರಾವರಿ ಜಮೀನು ಹೊಂದಿ ತೋಟಗಾರಿಕೆ ಬೆಳೆಯನ್ನು ಬೆಳೆಯುವ ರೈತರಿಗೆ ಹನಿ ನೀರಾವರಿ ಉಪಕರಣಗಳನ್ನು ತೋಟಗಳಿಗೆ ಅಳವಡಿಸಿಕೊಳಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಷ್ಟು, ಇತರೆ ವರ್ಗದವರಿಗೆ ಶೇ.75ರಷ್ಟು ಸಹಾಯಧನವನ್ನು ಮೊದಲ 2 ಹೆಕ್ಟೇರಿಗೆ ಹಾಗೂ ನಂತರದ ಪ್ರದೇಶಕ್ಕೆ ಶೇ.45ರಷ್ಟು ಸಹಾಯಧನ ನೀಡಲಾಗುತ್ತದೆ.

ಆಸಕ್ತ ಅರ್ಹ ರೈತರು ಆರ್‌ಡಿ ಸಂಖ್ಯೆ ಹೊಂದಿದ ಜಾತಿ ಪ್ರಮಾಣ ಸೇರಿದಂತೆ ಅಗತ್ಯ ದಾಖಲಾತಿಗಳ ಸಮೇತ ಸೆ.30ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ಹಡಗಲಿ ರೈತ ಸಂಪರ್ಕ ಕೇಂದ್ರ ಮೊ.8105166176, ಇಟ್ಟಗಿ ರೈತ ಸಂಪರ್ಕ ಕೇಂದ್ರ 9743674669 ಹಾಗೂ ಹಿರೇಹಡಗಲಿ ರೈತ ಸಂಪರ್ಕ ಕೇಂದ್ರ 8497812276 ಸಂಖ್ಯೆಗೆ ಸಂಪರ್ಕಿಸಬಹುದು.

Comments (0)
Add Comment