ಕೆಎಸ್‌ಒಯು ಪ್ರಶ್ನೆಪತ್ರಿಕೆ ಲೀಕ್ – ಮಂಗಳೂರು ಕೇಂದ್ರದ ಸಿಬ್ಬಂದಿಯಿಂದ ಕೃತ್ಯ?

ಬೆಂಗಳೂರು: ಪರೀಕ್ಷೆಗೆ ಒಂದು ದಿನ ಮೊದಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಪ್ರಶ್ನೆ ಪತ್ರಿಕೆ ಮಾರಾಟವಾಗಿದ್ದು ಕೆಎಸ್‌ಓಯು ಮಂಗಳೂರು ಕೇಂದ್ರದ ಸಿಬ್ಬಂದಿ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಾರಾಟ ಮಾಡಲಾಗುತ್ತಿದೆಯೇ ಎಂಬ ಅನುಮಾನದಿಂದ ವಿದ್ಯಾರ್ಥಿಯೋರ್ವ ಪರಿಶೀಲನೆ ಮಾಡಲು ಹಣ ನೀಡಿ ಪ್ರಶ್ನೆ ಪತ್ರಿಕೆ ತೆಗೆದುಕೊಂಡಿದ್ದು ಆದರೆ ಬಳಿಕ ಪರೀಕ್ಷೆಗೆ ನೀಡಿದ ಪ್ರಶ್ನೆಪತ್ರಿಕೆ ಮತ್ತು ಮಾರಾಟದಿಂದ ಪಡೆದ ಪ್ರಶ್ನೆಪತ್ರಿಕೆಯೂ ಒಂದೇ ಆಗಿತ್ತು. ಈ ಹಿನ್ನಲೆಯಲ್ಲಿ ಚಂದು.ಎಚ್.ಎಸ್. ಎಂಬ ವಿದ್ಯಾರ್ಥಿ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಾಟ್ಸಾಪ್ ಮೂಲಕ ಮಾರಾಟ ಮಾಡಲಾಗಿದ್ದು ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪರೀಕ್ಷೆ ಪ್ರಶ್ನೆ ಪತ್ರಿಕೆ 2000 ರೂಪಾಯಿಗೆ ಮಾರಾಟ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಇನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments (0)
Add Comment