ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಶೀಘ್ರದಲ್ಲೇ DA, DR ಏರಿಕೆ

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ಡಿಎ, ಡಿ ಆರ್ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಈ ಬಾರಿ ತುಟ್ಟಿಭತ್ಯೆ ಶೇ. 3 ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ 4 ಪ್ರತಿಶತದಷ್ಟು ಹೆಚ್ಚಳ ಮಾಡುವ ನೀರಿಕ್ಷೆಯೂ ಇದೆ.

ಇದನ್ನು ಸೆಪ್ಟೆಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ಆರಂಭದಲ್ಲಿ ಘೋಷಿಸುವ ನಿರೀಕ್ಷೆಯಿದೆ. ಒಮ್ಮೆ ಘೋಷಣೆಯಾದರೆ ಜುಲೈನಿಂದ ಮುಂದಿನ ಸೂಚನೆ ಬರುವವರೆಗಿನ ಡಿಎ ಬಾಕಿಯನ್ನು ವೇತನದ ಜೊತೆಗೆ ಪಾವತಿಸಲಾಗುವುದು.

ಕೇಂದ್ರ ಸರ್ಕಾರವು ಸೆಪ್ಟೆಂಬರ್ನಲ್ಲಿಯೇ ಡಿಎಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದರರ್ಥ ಉದ್ಯೋಗಿಗಳಿಗೆ ಡಿಎಯನ್ನು ಒಂದು ತಿಂಗಳು ಮುಂಚಿತವಾಗಿ ಹೆಚ್ಚಿಸಲಾಗುವುದು. ನೌಕರರಿಗೆ ಡಿಎ ಹೆಚ್ಚಾದಾಗ ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿಆರ್) ಸಹ ಹೆಚ್ಚಾಗುತ್ತದೆ. ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ 15 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಆದ್ದರಿಂದ ಈ ಬಾರಿ ಡಿಎ ಶೇಕಡಾ 3 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಲೆಕ್ಕದಲ್ಲಿ, ಡಿಎ ಶೇಕಡಾ 42 ರಿಂದ 45 ಕ್ಕೆ ಏರುತ್ತದೆ.

Comments (0)
Add Comment