ಕ್ರೂಸ್​ನಿಂದ ಬಿದ್ದು ಭಾರತೀಯ ಮಹಿಳೆ ಸಾವು

ಸಿಂಗಾಪುರ: ರಾಯಲ್ ಕೆರಿಬಿಯನ್ ಕ್ರೂಸ್‌ನಿಂದ ಬಿದ್ದು ಭಾರತೀಯ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೆಲ್ಬೋರ್ನ್ ಮೂಲದ ಉದ್ಯಮಿಯಾಗಿರುವ ಅವರ ಮಗ ಅಪೂರ್ವ ಸಹಾನಿ ತನ್ನ ತಾಯಿಯನ್ನು ಪತ್ತೆಹಚ್ಚಲು ಸಹಾಯ ಕೋರಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಅಪೂರ್ವ ಸಹಾನಿ ಅವರ ತಾಯಿ ರೀತಾ ಸಹಾನಿ ಅವರು ತಮ್ಮ ಪತಿ ಜಾಕೇಶ್ ಸಹಾನಿ ಅವರೊಂದಿಗೆ “ಸ್ಪೆಕ್ಟ್ರಮ್ ಆಫ್ ದಿ ಸೀಸ್” ಕ್ರೂಸ್ ಹಡಗಿನಲ್ಲಿ ಸಿಂಗಾಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಟ್ರೈಟ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.

ಕಾಣೆಯಾದ ತನ್ನ ತಾಯಿಯನ್ನು ಹುಡುಕಲು ಸಹಾಯ ಮಾಡಿ ಎಂದು ಮಗ ಅಪೂರ್ವ ಸಹಾನಿ ಟ್ವಿಟ್ಟರ್​ನಲ್ಲಿ ಪ್ರಧಾನ ಮಂತ್ರಿ ಕಚೇರಿಗೆ ಮನವಿ ಮಾಡಿದ್ದರು.
ಅಲ್ಲದೇ ತನ್ನ ತಾಯಿ ಸಿಂಗಾಪುರದಿಂದ ರಾಯಲ್ ಕೆರೆಬಿಯನ್ ಕ್ರೈಸ್​ನಲ್ಲಿ ಪ್ರಯಾಣಿಸುತ್ತಿದ್ದರು. ಹಡಗಿನಿಂದ ನಾಪತ್ತೆಯಾಗಿದ್ದಾರೆ. ಅವರು ಹಾರಿದ್ದಾರೆ ಎಂದು ಕ್ರೂಸ್ ಸಿಬ್ಬಂದಿ ಹೇಳುತ್ತಾರೆ. ಆದರೆ ನಮಗೆ ಯಾವುದೇ ಸಾಕ್ಷಿಯನ್ನ ತೋರಿಸುತ್ತಿಲ್ಲ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್​ಗೆ ಟ್ವಿಟ್ಟರ್​ನಲ್ಲಿ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.

ಕಾಣೆಯಾದ ಪತ್ನಿಯನ್ನು ಹಡುಕಲು ಸಹಾಯ ಮಾಡದೆ ಅವರು ತಂದೆಯನ್ನು ಕ್ರೂಸ್​ನಿಂದ ಹೊರಹಾಕಿದ್ದಾರೆ, ಅವರು ಯಾವುದೇ ರಕ್ಷಣಾ ಕಾರ್ಯ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. ಇದೀಗ ಕ್ರೂಸ್ ಲೈನರ್ ನಮ್ಮೊಂದಿಗೆ ದೃಶ್ಯವನ್ನ ಹಂಚಿಕೊಂಡಿದ್ದು ತಾಯಿ ಸತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ. ನನ್ನ ಕುಟುಂಬಕ್ಕೆ ಈ ಸಂಕಷ್ಟದ ಸಮಯದಲ್ಲಿ ನಿಮ್ಮ ಅಗಾದ ಬೆಂಬಲವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ನಾನು ಎಂದೆಂದಿಗೂ ಕೃತಜ್ಞರಾಗಿರುತ್ತೇನೆ. ಇದೀಗ ತಾಯಿಯ ಮೃತದೇಹಕ್ಕಾಗಿ ಹುಡುಕಾಟವೂ ನಡೆಯುತ್ತಿದೆ ಎಂದು ಮಗ ಅಪೂರ್ವ ಸಹಾನಿ ತಿಳಿಸಿದ್ದಾರೆ.

Comments (0)
Add Comment