ಗಣೇಶ ಚತುರ್ಥಿ ಆಚರಣೆ;ಈ ಊರುಗಳಲ್ಲಿ  ಮದ್ಯ ಮಾರಾಟ ನಿಷೇಧ

 

ಹೊಸಪೇಟೆ :ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಅಹಿತಕರ ಘಟನೆ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ದಿವಾಕರ ಎಂ.ಎಸ್. ಅವರು ಆದೇಶಿಸಿದ್ದಾರೆ.

ಕೂಡ್ಲಿಗಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಸೆ.18ರ ಬೆಳಿಗ್ಗೆ 6 ರಿಂದ ಸೆ.19ರ ಬೆಳಿಗ್ಗೆ 6 ಗಂಟೆಯವರೆಗೆ, ಸೆ.20ರ ಬೆಳಿಗ್ಗೆ 6 ರಿಂದ ಸೆ.21ರ ಬೆಳಿಗ್ಗೆ 6 ಗಂಟೆಯವರೆಗೆ, ಸೆ.22ರ ಬೆಳಿಗ್ಗೆ 6 ರಿಂದ ಸೆ.23ರ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಸೆ.26ರ ಮಂಗಳವಾರ ಬೆಳಿಗ್ಗೆ 6 ರಿಂದ ಸೆ.27ರ ಬುಧವಾರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಹೊಸಪೇಟೆ ಉಪವಿಭಾಗ ವ್ಯಾಪ್ತಿಯಲ್ಲಿ ಸೆ.20ರ ಬೆಳಿಗ್ಗೆ 6 ರಿಂದ ಸೆ .21ರ ಬೆಳಿಗ್ಗೆ 6 ಗಂಟೆಯವರೆಗೆ, ಸೆ.22ರ ಬೆಳಿಗ್ಗೆ 6 ರಿಂದ ಸೆ.23ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಹರಪನಹಳ್ಳಿ ಉಪವಿಭಾಗದಲ್ಲಿ ವ್ಯಾಪ್ತಿಯಲ್ಲಿ ಸೆ.20ರ ಬೆಳಿಗ್ಗೆ 6 ರಿಂದ ಸೆ.21ರ ಬೆಳಿಗ್ಗೆ 6 ಗಂಟೆಯವರೆಗೆ, ಸೆ.22ರ ಬೆಳಿಗ್ಗೆ 6 ರಿಂದ ಸೆ.23ರ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಸೆ.26ರ ಬೆಳಿಗ್ಗೆ 6 ರಿಂದ ಸೆ.27ರ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಸೆ.28ರ ಬೆಳಿಗ್ಗೆ 6 ರಿಂದ ಸೆ.29ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮಾಡದಂತೆ ಹಾಗೂ ಬಾರ್, ರೆಸ್ಟೋರೆಂಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಿದ್ದಾರೆ.

ಗಣೇಶ ಚತುರ್ಥಿ ಆಚರಣೆ;ಈ ಊರುಗಳಲ್ಲಿ  ಮದ್ಯ ಮಾರಾಟ ನಿಷೇಧ
Comments (0)
Add Comment