ಚೀತಾಗಳ ಸರಣಿ ಸಾವು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ

ಭೋಪಾಲ್: ಚೀತಾಗಳ ಸರಣಿ ಸಾವಿನ ಹಿನ್ನಲೆಯಲ್ಲಿ ಇಂದು (ಜುಲೈ 19ರಂದು) ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಜೆಕ್ಟ್‌ ಚೀತಾ ಸ್ಥಿತಿಗತಿ ಪರಿಶೀಲಿಸಲು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ತೀರಾ ಇತ್ತೀಚೆಗೆ ತೇಜಸ್ ಮತ್ತು ಸೂರಜ್ ಎಂಬ ಎರಡು ಗಂಡು ಚೀತಾಗಳು ಸಾವನ್ನಪ್ಪಿದ ನಂತರ ಈ ಸಭೆ ನಡೆಯುತ್ತಿದೆ. ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ, ಅಸೀಮ್ ಶ್ರೀವಾಸ್ತವ ಈ ಬಗ್ಗೆ ಮಾಹಿತಿ ನೀಡಿದ್ದು, ಚಿರತೆ ಸ್ಕ್ರೀನಿಂಗ್ ಸಮಿತಿಯ ಸದಸ್ಯರು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. “ಪ್ರಾಜೆಕ್ಟ್ ಚೀತಾ” ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ 17 ರಂದು ತಮ್ಮ ಜನ್ಮದಿನದಂದು ನಮೀಬಿಯಾದಿಂದ ತಂದ ಎಂಟು ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಿದ್ದರು. ಮತ್ತೆ ಈ ವರ್ಷ ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ತರಲಾಯಿತು. ಈ ಪೈಕಿ ಎಂಟು ಚಿರತೆಗಳು ಕುನೋದಲ್ಲಿ ಸಾವನ್ನಪ್ಪಿವೆ.

Comments (0)
Add Comment