‘ಜಿರಳೆ’ ಕಾಟದಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

ಮನೆ ಮಳಿಗೆ ಎಂದ ಮೇಲೆ ಕೀಟಗಳ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ ಇದು ಸಾಮಾನ್ಯ ಸಮಸ್ಯೆಯಂತು ಅಲ್ಲ. ಏಕೆಂದರೆ ಮನೆ ಎಷ್ಟೇ ಸ್ವಚ್ಛಂದವಾಗಿದ್ದರೂ ಅತಿಥಿಗಳ ಬಂದಾಗ ಒಂದು ಜಿರಲೆ ಕಾಣಿಸಿಕೊಂಡರೂ ಮುಜುಗರಕ್ಕೀಡಾಗುತ್ತೀರಿ.

ಹಾಗೆಯೇ ಅಡುಗೆ ಕೋಣೆಯಲ್ಲಿ ಜಿರಳೆಗಳು ಹೆಚ್ಚಾದಂತೆ ಅಪಾಯ ಕಟ್ಟಿಟ್ಟಬುತ್ತಿ. ಮನೆಯಲ್ಲಿರಿಸಿದ ಆಹಾರಗಳ ಮೇಲೆ ಜಿರಳೆಗಳು ಓಡಾಡುವುದರಿಂದ ಫುಡ್​ ಪಾಯಿಸನ್ ಹಾಗೂ ಇನ್ನಿತರ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಲವಂಗವನ್ನು ಕಿಚನ್ ಡ್ರಾಯರ್‌ಗಳಲ್ಲಿ ಇರಿಸಿದರೂ ಜಿರಲೆಗಳು ಬರುವುದಿಲ್ಲ. ಇದರ ವಾಸನೆಯಿಂದ ಜಿರಳೆಗಳು ಹೊರ ಹೋಗುತ್ತವೆ. ವಾರಕ್ಕೊಮ್ಮೆ ಜಿರಳೆಗಳಿರುವ ಜಾಗದಲ್ಲಿ ಲವಂಗವನ್ನು ಇರಿಸುವುದರಿಂದ ಕೀಟಗಳ ತೊಂದರೆಯನ್ನು ದೂರ ಮಾಡಬಹುದು.

ಕಾಫಿ ಪೌಡರ್‌ರನ್ನು ಅಡುಗೆ ಮನೆ ಸಂಧಿಗಳಲ್ಲಿ, ಮೂಲೆಗಳಲ್ಲಿ ಸಿಂಪಡಿಸಿ. ಬೆಳಗ್ಗೆ ಅಡುಗೆ ಮನೆ ಸ್ವಚ್ಚಮಾಡಿ. ಹೀಗೆ ಮೂರು ನಾಲ್ಕು ದಿನ ಮಾಡಿದರೆ ಜಿರಳೆಗಳು ಬರುವುದಿಲ್ಲ. ಬಿರಿಯಾನಿ ಎಲೆಗಳನ್ನು ಚೆನ್ನಾಗಿ ಪುಡಿ ಮಾಡಿ ಜಿರಳೆ ಹೆಚ್ಚಿರುವ ಜಾಗದಲ್ಲಿ ಹಾಗೂ ಅಡುಗೆ ಮನೆಯ ಎಲ್ಲಾ ಕಡೆ ಹಾಕುವುದರಿಂದ ಇದರ ವಾಸನೆಗೆ ಜಿರಳೆಗಳು ಬರುವುದಿಲ್ಲ.

ಬೇವು ಮತ್ತು ಅದರ ಎಲೆಗಳು ಅನೇಕ ಸಮಸ್ಯೆಗಳಿಗೆ ರಾಮಬಾಣ. ಹಾಗೆಯೇ ಜಿರಳೆಗಳನ್ನು ತೊಡೆದುಹಾಕಲು ನೀವು ಬೇವಿನ ಎಣ್ಣೆ ಅಥವಾ ಪುಡಿ ಎರಡನ್ನೂ ಬಳಸಬಹುದು. ಬೆಳ್ಳುಳ್ಳಿ ಅಥವಾ ಈರುಳ್ಳಿ ರಸವನ್ನು ಒಂದು ಲೋಟ ನೀರಿಗೆ ಹಾಕಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿಗೆ ಹಾಕಿ ಅಡುಗೆ ಮನೆಯ ಎಲ್ಲಾ ಮೂಲೆಗೂ ಸ್ಪ್ರೇ ಮಾಡಿದರೆ ಜಿರಳೆಗಳು ಮನೆಯಿಂದ ಆಚೆ ಹೋಗುತ್ತವೆ.

Comments (0)
Add Comment