ಟಾಟಾ ಸಮೂಹಕ್ಕೆ ಮಹಿಳಾ ಅಧಿಪತ್ಯ ಸಾಧ್ಯತೆ – ರತನ್ ಟಾಟಾಗೆ ಮಾಯಾ ಟಾಟಾ ಉತ್ತರಾಧಿಕಾರಿ?

ಮುಂಬೈ : ಟಾಟಾ ಸಮೂಹ ಹಿಂದಿನ ಮುಖ್ಯಸ್ಥ ಹಾಗೂ ಉದ್ಯಮಿ ರತನ್‌ ಟಾಟಾ ಅವರ ಉತ್ತರಾಧಿಕಾರಿಯಾಗಿ ಅವರ ಕುಟುಂಬದ್ದೇ ಕುಡಿಯಾದ ಮಾಯಾ ಟಾಟಾ ನೇಮಕಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಆಗಷ್ಟ್ 29ರಂದು ನಡೆಯಲಿರುವ ಟಾಟಾ ಸಮೂಹದ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. 34 ವರ್ಷದ ಮಾಯಾ ಟಾಟಾ, ರತನ್‌ ಟಾಟಾ ಅವರ ಮಲಸೋದರ ನಿಯೋಲ್‌ ಟಾಟಾ ಹಾಗೂ ಆಲೂ ಮಿಸ್ತ್ರಿ ದಂಪತಿಯ ಪುತ್ರಿ. ಆಲೂ ಮಿಸ್ತ್ರಿ ಇತ್ತೀಚೆಗೆ ನಿಧನರಾದ ಟಾಟಾ ಸಮೂಹದ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಅವರ ಸೋದರಿ. ಮಾಯಾ ಬ್ರಿಟನ್‌ನ ವಾವ್ರಿಕ್‌ ವಿಶ್ವವಿದ್ಯಾಲಯ ಹಾಗೂ ಬೇಯರ್ಸ್ ಬಿಸಿನೆಸ್‌ ಸ್ಕೂಲ್‌ನಲ್ಲಿ ಪದವೀಧರೆಯಾಗಿದ್ದಾರೆ. ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಮಾಯಾ ಟಾಟಾ, ಟಾಟಾ ಮೆಡಿಕಲ್‌ ಸೆಂಟರ್‌ ಟ್ರಸ್ಟ್‌ನ ಆಡಳಿತ ಮಂಡಳಿಯಲ್ಲಿ ಇತ್ತೀಚೆಗೆ ಸ್ಥಾನ ಪಡೆದಿದ್ದಾರೆ. ಇದು ಇಡಿ ಸಮೂಹದ ಮುಖ್ಯಸ್ಥೆಯನ್ನಾಗಿ ಅವರನ್ನು ಘೋಷಿಸಲು ಬರೆಯಲಾದ ಮುನ್ನುಡಿ ಎಂದು ಕೆಲವು ಮಾಧ್ಯಮಗಳು ವಿಶ್ಲೇಷಿಸಿವೆ. ನೋಯೆಲ್ ಟಾಟಾ ಮೂವರು ಮಕ್ಕಳಲ್ಲಿ ಮಾಯಾ ಕಿರಿಯವಳು. ಮಾಯಾ ಟಾಟಾ ಗ್ರೂಪ್‌ನೊಂದಿಗೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

Comments (0)
Add Comment