ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ

ಹೈದರಾಬಾದ್: ಆಂಧ್ರಪ್ರದೇಶ ಮಾಜಿ ಸಿಎಂ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಚಂದ್ರಬಾಬು ನಾಯ್ಡು ಸ್ಕಿಲ್‌ ಡೆವಲಪ್‌ಮೆಂಟ್‌ ಹಗರಣದ A-1 ಆರೋಪಿಯಾಗಿದ್ದು, ಹಗರಣ ಸಂಬಂಧ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸೂಚನೆ ಮೇರೆಗೆ ಆಂಧ್ರದ ನಂದ್ಯಾಲದಲ್ಲಿ ರಾತ್ರೋರಾತ್ರಿ ಅವರನ್ನು ಬಂಧಿಸಲಾಗಿದೆ. ಇವರ ಜೊತೆಗೆ ಹಲವು ಟಿಡಿಪಿ ಮುಖಂಡರನ್ನೂ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

2015ರಲ್ಲಿ ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾಗ ಕೌಶಲಾಭಿವೃದ್ಧಿಗಾಗಿ ಸರ್ಕಾರ ಸೀಮೆನ್ಸ್ ಮತ್ತು ಡಿಸೈನ್ ಟೆಕ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆಗ ಅವರ ವಿರುದ್ಧ 371 ಕೋಟಿ ರೂ. ಹಣ ದುರುಪಯೋಗದ ಪಡಿಸಿಕೊಂಡ ಆರೋಪದ ಕೇಳಿ ಬಂದಿತ್ತು. ಹೀಗಾಗಿ 2020ರ ಆಗಸ್ಟ್‌ನಲ್ಲಿ ವೈಸಿಪಿ ಸರ್ಕಾರ ಆರೋಪಗಳ ಕುರಿತು ತನಿಖೆಗೆ ಆದೇಶಿಸಿತ್ತು. 2020ರ ಡಿ. 10ರಂದು ವಿಜಿಲೆನ್ಸ್, 2021 ಫೆಬ್ರವರಿಯಲ್ಲಿ ಎಸಿಬಿ ತನಿಖೆ, ಡಿಸೆಂಬರ್‌ನಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು

Comments (0)
Add Comment