ಟಿವಿ ವಾಹಿನಿಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ದೇಶನ

ನವದೆಹಲಿ : ಗಂಭೀರ ಅಪರಾಧಗಳು ಭಯೋತ್ಪಾದನೆ ಮತ್ತು ನಿಷೇಧಿತ ಸಂಘಟನೆಗಳ ಹಿನ್ನೆಲೆ ಇರುವವರಿಗೆ ತಮ್ಮ ಅಭಿಪ್ರಾಯ ಹೇಳಲು ಅವಕಾಶ ನೀಡದಂತೆ ಹಾಗೂ ಅವರಿಗೆ ಯಾವುದೇ ರೀತಿ ವೇದಿಕೆ ಕೊಡದಂತೆ ಕೇಂದ್ರದಿಂದ ಎಲ್ಲಾ ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಸಂವಿಧಾನ ಆರ್ಟಿಕಲ್ 19(2) ಕೇಬಲ್ ಟಿಲಿವಿಷನ್ ನೆಟ್‌ವರ್ಕ್(CTN) ಕಾಯ್ದೆಯ ಸೆಕ್ಷನ್ 20 ಅಡಿಯಲ್ಲಿ ಈ ಒಂದು ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ. ಇತ್ತೀಚಿಗೆ ನಿಷೇಧಿತ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬರು ದೇಶದ ಸಾರ್ವಭೌಮತ್ವ, ಭದ್ರತೆ ಹಾಗೂ ವಿದೇಶಿ ಸಂಬಂಧಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದರು.

Comments (0)
Add Comment