ತಾಂತ್ರಿಕ ದೋಷ: ಚಂದ್ರನ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸಲು ವಿಫಲವಾದ ರಷ್ಯಾದ ಲೂನಾ-25 ಲ್ಯಾಂಡರ್

ರಷ್ಯಾ: ರಷ್ಯಾದ ಲೂನಾ-25 ಬಾಹ್ಯಾಕಾಶ ನೌಕೆಯಲ್ಲಿ ಶನಿವಾರ ಸಂಜೆ ತಾಂತ್ರಿಕ ದೋಷ ಕಂಡುಬಂದಿದೆ. ರೊಬೊಟಿಕ್ ಬಾಹ್ಯಾಕಾಶ ನೌಕೆಯು ಶನಿವಾರ ಕಕ್ಷೆಯನ್ನು ಪ್ರವೇಶಿಸಬೇಕಾಗಿತ್ತು.ಕಕ್ಷೆಯ ಬದಲಾವಣೆಯ ಸಮಯದಲ್ಲಿ ತುರ್ತು ದೋಷ ಕಂಡುಬಂದಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ.ಇದರಿಂದಾಗಿ ಕಕ್ಷೆ ಬದಲಾವಣೆ ಸರಿಯಾಗಿ ಆಗಲಿಲ್ಲ. ನಿರ್ವಹಣಾ ತಂಡವು ಪರಿಸ್ಥಿತಿಯನ್ನು ನಿರ್ಣಯಿಸುತ್ತಿದೆ ಎಂದು ಹೇಳಿದೆ. ಲೂನಾ ಆಗಸ್ಟ್ 21 ರಂದು ಚಂದ್ರನ ಮೇಲೆ ಇಳಿಯಲಿದೆ. ಲೂನಾ-25 ಬಾಹ್ಯಾಕಾಶ ನೌಕೆಯನ್ನು ಆಗಸ್ಟ್ 11 ರಂದು ಅಮುರ್ ಪ್ರದೇಶದ ವೋಸ್ಟೋನಿ ಕಾಸ್ಮೋಡ್ರೋಮ್‌ನಿಂದ ಸೋಯುಜ್ 2.1 ಬಿ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿತ್ತು.

Comments (0)
Add Comment