ದೆಹಲಿಯಲ್ಲಿ ಜಿ20 ಶೃಂಗಸಭೆ ಆರಂಭ

ಇಂದಿನಿಂದ ದೆಹಲಿಯಲ್ಲಿ 20 ಶೃಂಗಸಭೆಯ ಎರಡು ದಿನಗಳ ಕಾರ್ಯಕ್ರಮ ಆರಂಭವಾಗಿದೆ. ಅಮೆರಿಕ, ಫ್ರಾನ್ಸ್, ಜಪಾನ್, ಬ್ರಿಟನ್, ಇಟಲಿ, ಟರ್ಕಿ ಸೇರಿದಂತೆ ಸದಸ್ಯ ರಾಷ್ಟ್ರಗಳ ಮತ್ತು ಅತಿಥಿ ರಾಷ್ಟ್ರಗಳ ಮುಖ್ಯಸ್ಥರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ದೆಹಲಿ ತಲುಪಿದ್ದಾರೆ.

ಭಾರತ್‌ ಮಂಟಪದ ಲಾಂಜ್‌ನಲ್ಲಿ ಬೆಳಗ್ಗೆ 9:30ಕ್ಕೆ ಅತಿಥಿಗಳ ಸಭೆ ಆರಂಭವಾಗಿದ್ದು. ಮೊದಲ ಅಧಿವೇಶನವು 10:30ಕ್ಕೆ ‘ಒನ್ ಅರ್ಥ್’ ವಿಷಯದಲ್ಲಿ ನಡೆಯಲಿದ್ದು, ಬಳಿಕ ಮಧ್ಯಾಹ್ನ 3 ಗಂಟೆಗೆ ‘ಒಂದು ಕುಟುಂಬ’ ಕುರಿತು ಎರಡನೇ ಗೋಷ್ಠಿ ಜರುಗಲಿದೆ.

ಜಿ20 ಶೃಂಗಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಜಿ20 ಒಕ್ಕೂಟಕ್ಕೆ ಆಫ್ರಿಕನ್​ ಒಕ್ಕೂಟ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದ್ದಾರೆ.. ಆ ಮೂಲಕ ಜಿ20 ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್​ ಒಕ್ಕೂಟ ಸೇರ್ಪಡೆಯಾದಂತಾಗಿದೆ.

Comments (0)
Add Comment