ದೇಶದ ಶೇ. 40ರಷ್ಟು ಸಂಸದರ ವಿರುದ್ಧ ಇದೆ ಕ್ರಿಮಿನಲ್ ಕೇಸ್ ..!

ಸಂಸತ್ ನ ಶೇ. 40 ರಷ್ಟು ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ವರದಿ ಮಾಡಿದೆ.

ಕಳೆದ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಂಸದರು ಸಲ್ಲಿಸಿದ ಅಫಿಡವಿಟ್‌ಗಳಿಂದ ಈ ಮಾಹಿತಿ ಸಂಗ್ರಹಿಸಲಾಗಿದೆ.

ಒಟ್ಟು 763 ಸದಸ್ಯರಲ್ಲಿ 306 ಮಂದಿ ವಿವಿಧ ಕ್ರಿಮಿನಲ್ ಮೊಕದ್ದಮೆಗಳಿವೆ. ಸುಮಾರು 194 ಅಂದರೆ ಶೇ. 25ರಷ್ಟು ಸಂಸದರ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ವಿವಿಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.

ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ ಸಂಸದರ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನದಲ್ಲಿದ್ದು, ಇಲ್ಲಿನ ಶೇ. 73 ಸಂಸದರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅನಂತರ ಬಿಹಾರ, ಮಹಾರಾಷ್ಟ್ರ ದಲ್ಲಿ 57, ತೆಲಂಗಾಣದಲ್ಲಿ ಶೇ. 50 ಸಂಸದರ ಅತಿ ಹೆಚ್ಚು ಶೇಕಡಾವಾರು ಗಂಭೀರ ಅಪರಾಧ ಪ್ರಕರಣಗಳನ್ನು ಹೊಂದಿದ್ದಾರೆ. ಅನಂತರ ತೆಲಂಗಾಣ ಶೇ. 9, ಕೇರಳ ಶೇ. 10, ಮಹಾರಾಷ್ಟ್ರ ಶೇ. 34 ಮತ್ತು ಉತ್ತರ ಪ್ರದೇಶದ ಶೇ. 37 ರಷ್ಟು ಮಂದಿ ಸಾಮಾನ್ಯ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಪಕ್ಷವಾರು ಗಮನಿಸಿದರೆ, ಭಾರತೀಯ ಜನತಾ ಪಕ್ಷದ 385 ಸಂಸದರಲ್ಲಿ 139, ಕಾಂಗ್ರೆಸ್‌ನ 81 ಸಂಸದರಲ್ಲಿ 43, ತೃಣಮೂಲದ 36 ಸಂಸದರಲ್ಲಿ 14, ಕಾಂಗ್ರೆಸ್ (ಟಿಎಂಸಿ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಯಿಂದ 6 ಸಂಸದರಲ್ಲಿ 5, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಥವಾ ಸಿಪಿಐ(ಎಂ), 8 ಸಂಸದರಲ್ಲಿ 3, ಆಮ್ ಆದ್ಮಿ ಪಕ್ಷದ (ಎಎಪಿ) 11 ಸಂಸದರಲ್ಲಿ 3, ವೈಎಸ್ ಆರ್ ಸಿಪಿ ಯ 31 ಸಂಸದರಲ್ಲಿ 13 ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) 8 ಸಂಸದರಲ್ಲಿ 3 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.

32 ಸಂಸದರು ಕೊಲೆ ಯತ್ನ (ಐಪಿಸಿ ಸೆಕ್ಷನ್ 307) ಪ್ರಕರಣಗಳನ್ನು ಘೋಷಿಸಿದ್ದಾರೆ. 21 ಸಂಸದರು ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿದ್ದಾರೆ. ಅವರಲ್ಲಿ 4 ಸಂಸದರು ಅತ್ಯಾಚಾರ ಪ್ರಕರಣಗಳನ್ನು (ಐಪಿಸಿ ಸೆಕ್ಷನ್ 376) ಘೋಷಿಸಿದ ಕೊಂಡಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿ ಸಂಸದರ ಸರಾಸರಿ ಆಸ್ತಿ ₹38.33 ಕೋಟಿ. ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಂಸದರ ಸರಾಸರಿ ಆಸ್ತಿ ₹ 50.03 ಕೋಟಿಯಾಗಿದ್ದರೆ, ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದ ಸಂಸದರ ಆಸ್ತಿ ₹ 30.50 ಕೋಟಿ ರೂ. ಇದೆ.
ತೆಲಂಗಾಣದ 24 ಸಂಸದರು 262.26 ಕೋಟಿ ಮೌಲ್ಯದ ಸರಾಸರಿ ಆಸ್ತಿಯೊಂದಿಗೆ ಸಂಸದರ ಅತ್ಯಧಿಕ ಸರಾಸರಿ ಆಸ್ತಿಯನ್ನು ಹೊಂದಿದ್ದಾರೆ,

ಆಂಧ್ರಪ್ರದೇಶದ 36 ಸಂಸದರು 150.76 ಕೋಟಿ ಮೌಲ್ಯದ ಸರಾಸರಿ ಆಸ್ತಿ ಮತ್ತು ಪಂಜಾಬ್ ನ 20 ಸಂಸದರು ಸರಾಸರಿ ಆಸ್ತಿ 88.94 ಕೋಟಿ ರೂ. , 385 ಬಿಜೆಪಿ ಸಂಸದರ ಪ್ರತಿ ಸಂಸದರ ಸರಾಸರಿ ಆಸ್ತಿ 18.31 ಕೋಟಿ ರೂ., 81 ಕಾಂಗ್ರೆಸ್ ಸಂಸದರ ಸರಾಸರಿ ಆಸ್ತಿ 39.12 ಕೋಟಿ ರೂ., 36 ಟಿಎಂಸಿ ಸಂಸದರ ಸರಾಸರಿ ಆಸ್ತಿ 8.72 ಕೋಟಿ ರೂ., 31 ವೈಎಸ್‌ಆರ್‌ಸಿಪಿ ಸಂಸದರ ಸರಾಸರಿ ಆಸ್ತಿ 153.76 ಕೋಟಿ ರೂ., 16 ತೆಲಂಗಾಣ ರಾಷ್ಟ್ರ ಸಮಿತಿ ಸಂಸದರು ಸರಾಸರಿ ಆಸ್ತಿ ಮೌಲ್ಯ 383.51 ಕೋಟಿ ರೂ., 8 ಎನ್‌ಸಿಪಿ ಸಂಸದರ ಸರಾಸರಿ ಆಸ್ತಿ 30.11 ಕೋಟಿ ರೂ., ಮತ್ತು 11 ಎಎಪಿ ಸಂಸದರು ಸರಾಸರಿ ಆಸ್ತಿ 119.84 ಕೋಟಿ. ರೂ. ಇದೆ

ಲೋಕಸಭೆಯ ನಾಲ್ಕು ಸ್ಥಾನಗಳು ಮತ್ತು ರಾಜ್ಯಸಭೆಯ ಒಂದು ಸ್ಥಾನವು ಖಾಲಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ನಾಲ್ಕು ರಾಜ್ಯಸಭಾ ಸ್ಥಾನಗಳು ಅನಿರ್ದಿಷ್ಟವಾಗಿವೆ. ಒಬ್ಬ ಲೋಕಸಭಾ ಸಂಸದ ಮತ್ತು 3 ರಾಜ್ಯಸಭಾ ಸಂಸದರ ಅಫಿಡವಿಟ್‌ಗಳು ಲಭ್ಯವಿಲ್ಲದ ಕಾರಣ ಅವರ ಅಫಿಡವಿಟ್ ಅನ್ನು ಪರಿಶೀಲಿಸಲಾಗಿಲ್ಲ ಎಂದು ವರದಿ ತಿಳಿಸಿದೆ.

Comments (0)
Add Comment