‘ನನ್ನ ಹೊಟ್ಟೆಯ ಸರ್ಜರಿಯ ಗುರುತು ಪ್ರೀತಿಯ ಸಂಕೇತ’ – ತಂದೆಗೆ ಲಿವರ್​ ದಾನ ಮಾಡಿದ ಪುತ್ರಿ

ಮುಂಬೈ: 2022ರ ಫೆ. 15ರಂದು ನನ್ನ ತಂದೆಗೆ ಲಿವರ್ ದಾನ ಮಾಡಿದೆ. ನಾನು ಅಪ್ಪ ಒಂದಿಷ್ಟು ದಿನ ಐಸಿಯುನಲ್ಲಿ ಕಳೆದೆವು ಆದರೆ ಈಗ ನಾನೂ ನನ್ನ ಅಪ್ಪ ಆರೋಗ್ಯವಾಗಿದ್ದೇವೆ. ನನ್ನ ಹೊಟ್ಟೆಯ ಮೇಲಿನ ಹೊಲಿಗೆಗಳು ಪ್ರೀತಿಯ ಸಂಕೇತ ಎಂದು 23ನೇ ವಯಸ್ಸಿನ ಸಾಕ್ಷಿ ತ್ಯಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನ ತಂದೆಗೆ 2022ರಲ್ಲಿ ಲಿವರ್ ಸಿರೋಸಿಸ್ ಕೊನೆಯ ಹಂತದಲ್ಲಿತ್ತು ಆಗ ಲಿವರ್ ಟ್ರಾನ್ಸ್​ಪ್ಲಾಂಟ್​ ಮಾಡದಿದ್ದರೆ ಜೀವಕ್ಕೇ ಅಪಾಯ ಎಂದು ವೈದ್ಯರು ಹೇಳಿದ್ದರು. ಆಗ ನನ್ನ ಅಪ್ಪನೇ ನನ್ನ ಭವಿಷ್ಯ, ಅವರಿಗಾಗಿ ನಾನು ಏನು ಮಾಡಲೂ ಸಿದ್ಧ ಎಂದು ಲಿವರ್​ ದಾನ ಮಾಡಲು ನಾನು ಮುಂದೆ ಬಂದೆ ಎಂದರು.

ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ವಿಡೀಯೊವೊಂದನ್ನು ಹಂಚಿಕೊಳ್ಳಲಾಗಿದ್ದು, ಈ ವಿಡೀಯೊ ಈವರೆಗೆ 2.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

Comments (0)
Add Comment