ನೆದರ್ಲ್ಯಾಂಡ್ಸ್‌ನಲ್ಲಿ ಭಾರತೀಯ ರೆಸ್ಟೋರೆಂಟ್ ತೆರೆದ ಸುರೇಶ್ ರೈನಾ

ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್, ಆಲ್‌ರೌಂಡರ್ ಸುರೇಶ್ ರೈನಾ ನೆದರ್ಲ್ಯಾಂಡ್ಸ್ ರಾಜಧಾನಿ ಆಂಸ್ಟರ್‌ಡ್ಯಾಮ್‌ನಲ್ಲಿ ಭಾರತೀಯ ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ. ಈ ಸಂಬಂಧ ರೈನಾ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ‘ಆಮ್‌ಸ್ಟರ್‌ಡ್ಯಾಮ್‌ನ ಹೃದಯ ಭಾಗದಲ್ಲಿ ಇಂಡಿಯನ್ ರೆಸ್ಟೊರಂಟ್ ಪರಿಚಯಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಭೋಜನದ ಮೇಲಿನ ನನ್ನ ಪ್ರೀತಿಯನ್ನು ನೀವು ಈಗಾಗಲೇ ನೋಡಿದ್ದೀರಿ. ಭಾರತದ ಬಹುಬಗೆಯ ನಿಜವಾದ ರುಚಿಗಳನ್ನು ಇಲ್ಲಿರುವ ಭಾರತೀಯರು ಸೇರಿದಂತೆ ಯುರೋಪ್ ಜನರಿಗೆ ತಲುಪಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಉತ್ತರ ಪ್ರದೇಶ ಮೂಲದ ಸುರೇಶ್ ರೈನಾ ಅವರು 2022ರಲ್ಲಿ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಹೋಟೆಲ್ ಉದ್ಯಮದಲ್ಲಿ ಇನ್ನಿಂಗ್ಸ್‌ ಆರಂಭಿಸುತ್ತಿದ್ದಾರೆ.

Comments (0)
Add Comment