ನ್ಯೂಜಿಲೆಂಡ್‌: ಅಗ್ನಿ ದುರಂತ- ಹತ್ತು ಜನರ ಸಾವು, ಹಲವರಿಗೆ ಗಾಯ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ನಗರದಲ್ಲಿರುವ 4 ಅಂತಸ್ತಿನ ಹಾಸ್ಟೆಲ್ ಕಟ್ಟಡವೊಂದರಲ್ಲಿ ಮಂಗಳವಾರ ಅಗ್ನಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.

https://suddimane.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%95%e0%b2%be%e0%b2%82%e0%b2%97%e0%b3%8d%e0%b2%b0%e0%b3%86%e0%b2%b8%e0%b3%8d-%e0%b2%b8%e0%b2%b0%e0%b3%8d/

ನಗರ ಶೋಧ ಮತ್ತು ರಕ್ಷಣಾ ಸಿಬ್ಬಂದಿಗಳು ವೆಲ್ಲಿಂಗ್ಟನ್ ಹಾಸ್ಟೆಲ್‌ನ ಹೊಗೆಯಾಡುತ್ತಿರುವ ಅವಶೇಷಗಳಲ್ಲಿ ಬದುಕುಳಿದಿರುವವರನ್ನು ಉಳಿಸಲು ಶೋಧ ಕಾರ್ಯ ಆರಂಭಿಸಿದ್ದಾರೆ. ಅಗ್ನಿ ದುರಂತ ನಡೆದ ಕೆಲ ಗಂಟೆಗಳ ನಂತರ, ಪ್ರಧಾನ ಮಂತ್ರಿ ಕ್ರಿಸ್ ಹಿಪ್ಟಿನ್ಸ್ ಅವರು ದುರಂತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ದೃಢಪಡಿಸಿದ್ದಾರೆ ಮತ್ತು ಇನ್ನೂ ಹೆಚ್ಚಿನವರು ಗಾಯಗೊಂಡಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದರು. ಆದರೆ ಇದೀಗ ದುರಂತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಕಟ್ಟಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಇಂದು ಬೆಳಿಗ್ಗೆ ದೃಢಪಡಿಸಿದ್ದಾರೆ. ಇನ್ನೂ 20 ಜನರು ಪತ್ತೆಯಾಗಿಲ್ಲ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.

Comments (0)
Add Comment